ಬೆಂಗಳೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಕೇಸ್ ಹಾವಳಿ ದಿನೇದಿನೇ ಜಾಸ್ತಿ ಆಗ್ತಾ ಇದೆ. ಕೊರೊನಾ ಕೇಸ್ ಕಡಿಮೆಯಾಗುತ್ತಿದ್ದಂತೆ ಬ್ಲ್ಯಾಕ್ ಫಂಗಸ್ ಕೇಸ್ ಏರಿಕೆಯಾಗ್ತಾ ಇದೆ. ರಾಜ್ಯದ 30 ಜಿಲ್ಲೆಗಳಲ್ಲೂ ಒಟ್ಟು 3,636 ಬ್ಲ್ಯಾಕ್ ಫಂಗಸ್ ಕೇಸ್ ದಾಖಲಾಗಿದೆ. ಬ್ಲ್ಯಾಕ್ ಫಂಗಸ್ ಗೆ ರಾಜ್ಯಾದ್ಯಂತ 337 ಜನ ಬಲಿಯಾಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಕೂಡ ಬ್ಲ್ಯಾಕ್ ಫಂಗಸ್ ಹಾವಳಿ ಜೋರಿದೆ. ಇಲ್ಲಿಯವರೆಗೂ ಬೆಂಗಳೂರಿನಲ್ಲಿ 1,158 ಬ್ಲ್ಯಾಕ್ ಫಂಗಸ್ ಕೇಸ್ ದಾಖಲಾಗಿವೆ. ಜೊತೆಗೆ ಬ್ಲ್ಯಾಕ್ ಫಂಗಸ್‍ಗೆ ಬೆಂಗಳೂರಿನಲ್ಲಿ 110 ಜನ ಸಾವನ್ನಪ್ಪಿದ್ದಾರೆ. ದಿನೇ ದಿನೇ ಕೇಸ್ ಏರಿಕೆಯಾಗ್ತಾ ಇದ್ದು ಆತಂಕ ಹುಟ್ಟಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು 1,606 ಮಂದಿಗೆ ಕೊರೊನಾ – 31 ಸಾವು
ರಾಜ್ಯದ 30 ಜಿಲ್ಲೆಗಳಲ್ಲಿ ಅತಿ ಹೆಚ್ಚು ಬ್ಲ್ಯಾಕ್ ಫಂಗಸ್ ಇರುವುದು ಬೆಂಗಳೂರು ನಗರದಲ್ಲಿ. ಬೆಂಗಳೂರಿನಲ್ಲಿ ಇದುವರೆಗೂ 1158 ಕೇಸ್ ದಾಖಲಾಗಿದ್ದು, ಅದರಲ್ಲಿ 971 ಜನ ಟ್ರೀಟ್ಮೆಂಟ್ ಪಡೆಯುತ್ತಾ ಇದ್ದಾರೆ. ವಿಕ್ಟೋರಿಯಾದಲ್ಲಿ 208 ಕೇಸ್, ಬೌರಿಂಗ್ ಆಸ್ಪತ್ರೆ 389 ಕೇಸ್, ಕೆಸಿ ಜನರಲ್ 04 ಕೇಸ್, ಇಂದಿರಾಗಾಂಧಿ 3 ಕೇಸ್ ಪತ್ತೆಯಾಗಿದೆ. ಖಾಸಗಿ ಆಸ್ಫತ್ರೆಗಳಲ್ಲೂ ಕೇಸ್ ಏರಿಕೆಯಾಗ್ತಾನೆ ಇದೆ.