ಬೆಂಗಳೂರು: ಕೇಂದ್ರ ಸರ್ಕಾರ ಲಾಕ್‍ಡೌನ್ 4.0ರ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಸಡಿಲಿಕೆಯ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಳೆ ಒಂದು ದಿನ ಹಳೆಯ ಮಾರ್ಗಸೂಚಿ ಚಾಲ್ತಿಯಲ್ಲಿರಲಿದೆ. ಸೋಮವಾರ ಸಿಎಂ ಯಡಿಯೂರಪ್ಪನವರ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆಯಲಿದೆ. ಸಭೆಯ ಬಳಿಕ ರಾಜ್ಯದಲ್ಲಿ ಲಾಕ್‍ಡೌನ್ 4.0 ಹೇಗಿರಲಿದೆ ಎಂಬುದರ ಕುರಿತ ಮಹತ್ವದ ಆದೇಶ ಹೊರಬೀಳಲಿದೆ.
Advertisement
ಲಾಕ್‍ಡೌನ್ 4.0 ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟhttps://t.co/iHByDIPStp#Lockdown4 #CoronaVirus #COVID19
— PublicTV (@publictvnews) May 17, 2020
Advertisement
ಕೇಂದ್ರ ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ಬಹುತೇಕ ವಲಯಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದು, ಅದನ್ನು ಜಾರಿಗೆ ತರಬೇಕೋ ಅಥವಾ ಬೇಡವೋ ಅನ್ನೋದನ್ನ ರಾಜ್ಯ ಸರ್ಕಾರಗಳೇ ನಿರ್ಧರಿಸಬೇಕಿದೆ. ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಉಳಿದೆಲ್ಲಡೆ ವ್ಯಾಪಾರ ವಹಿವಾಟಿಗೆ ಷರತ್ತು ಬದ್ಧ ಅನುಮತಿಯನ್ನು ನೀಡಲಾಗಿದೆ. ಅದೇ ರೀತಿ ಸಾರ್ವಜನಿಕ ಪ್ರದೇಶಗಳ ಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಕೇಂದ್ರ ಸಲಹೆ ನೀಡಿದೆ.
Advertisement
ಲಾಕ್‍ಡೌನ್ 4.0 ಕೇಂದ್ರದ ಮಾರ್ಗಸೂಚಿ ಪ್ರಕಟ- ರಾಜ್ಯ ಸರ್ಕಾರದ ಆದೇಶ ವಾಪಸ್https://t.co/orACI9Glpn#Lockdown4 #Karnataka #Lockdown #CoronaVirus #COVID19
— PublicTV (@publictvnews) May 17, 2020