ಬೆಂಗಳೂರು: ಕರ್ನಾಟಕದಲ್ಲಿ ದಾಖಲೆ ಪ್ರಮಾಣದಲ್ಲಿ ಕೊರೊನಾ ಸೋಂಕು ವರದಿಯಾಗುತ್ತಿರುವ ಹಿನ್ನೆಲೆಯುಲ್ಲಿ ಸಾರ್ವಜನಿಕ ಸಮಾರಂಭ/ ಆಚರಣೆ/ ಮನರಂಜನೆ ಕಾರ್ಯಕ್ರಮಗಳಿಗೆ ಮಾರ್ಗಸೂಚಿ ಪ್ರಕಟಗೊಂಡಿದೆ.
ಧಾರ್ಮಿಕ ಆಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಕರ್ನಾಟಕ ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಆದೇಶ ಪ್ರಕಟಿಸಿದ್ದಾರೆ. ಈ ಆದೇಶವನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60 ಹಾಗೂ ಐಪಿಸಿ ಸೆಕ್ಷನ್ ಮತ್ತು ಇತರ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
Advertisement
ಕರ್ನಾಟಕ ಸರ್ಕಾರದ ಪರಿಷ್ಕೃತ ಮಾರ್ಗಸೂಚಿ
ಮದುವೆ- #Marriage ತೆರೆದ ಪ್ರದೇಶಗಳಲ್ಲಿ ಗರಿಷ್ಠ 200 ಮಂದಿ.
ಕಲ್ಯಾಣಮಂಟಪ, ಸಭಾಂಗಣಗಳು, ಹಾಲ್‌ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳು- ಗರಿಷ್ಠ 100 ಮಂದಿ #Karnataka #COVIDSecondWave #Covid19
— PublicTV (@publictvnews) April 16, 2021
Advertisement
ಯಾವುದಕ್ಕೆ ಎಷ್ಟು ಜನ?
ಮದುವೆ:
ತೆರೆದ ಪ್ರದೇಶದಲ್ಲಿ ಗರಿಷ್ಠ 200 ಮಂದಿಗೆ ಅನುಮತಿ. ಕಲ್ಯಾಣ ಮಂಟಪ/ ಸಭಾಂಗಣ/ ಹಾಲ್ ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ ಗರಿಷ್ಟ 100 ಮಂದಿಗೆ ಮಾತ್ರ ಅವಕಾಶ.
Advertisement
ಜನ್ಮದಿನ ಇತರೇ ಆಚರಣೆ
ತೆರೆದ ಪ್ರದೇಶದಲ್ಲಿ 50 ಮಂದಿಗೆ ಅನುಮತಿ. ಸಭಾಂಗಣ, ಹಾಲ್, ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ 25 ಮಂದಿಗೆ ಅನುಮತಿ.
Advertisement
#Karnataka #CovidGuidelines
ಜನ್ಮದಿನ ಹಾಗೂ ಇತರೆ ಆಚರಣೆಗಳು
ತೆರೆದ ಪ್ರದೇಶಗಳಲ್ಲಿ ಗರಿಷ್ಠ 50 ಮಂದಿ
ಸಭಾಂಗಣ, ಹಾಲ್‌ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳು ಗರಿಷ್ಠ 25 ಮಂದಿ #Karnataka #COVIDSecondWave #Covid19
— PublicTV (@publictvnews) April 16, 2021
ನಿಧನ/ ಶವಸಂಸ್ಕಾರ:
ತೆರೆದ ಪ್ರದೇಶದಲ್ಲಿ 50 ಮಂದಿ, ಸಭಾಂಗಣ, ಹಾಲ್, ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ 25 ಮಂದಿಗೆ ಅವಕಾಶ.
ಅಂತ್ಯ ಕ್ರಿಯೆಯಲ್ಲಿ 25 ಮಂದಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಇತರೇ ಸಮಾರಂಭಗಳಿಗೆ 50 ಮಂದಿ ಮಾತ್ರ ಅವಕಾಶ ನೀಡಲಾಗಿದೆ.
ರಾಜಕೀಯ ಸಮಾರಂಭಗಳಿಗೆ ತೆರೆದ ಪ್ರದೇಶದಲ್ಲಿ 200 ಮಂದಿಗೆ ಮಾತ್ರ ಅನುಮತಿ ನೀಡಲಾಗಿದೆ.
ಬೈಎಲೆಕ್ಷನ್ ಪ್ರಚಾರಕ್ಕೆ ತೆರೆ ಬೆನ್ನಲ್ಲೆ ರಾಜ್ಯಸರ್ಕಾರದಿಂದ ಹೊಸ ಮಾರ್ಗಸೂಚಿ – ಸಭೆ ಸಮಾರಂಭ ಮದುವೆಗಳಿಗೆ ಹೊಸ ಮಾರ್ಗಸೂಚಿ ಪ್ರಕಟ #Karnataka #COVIDSecondWave #Covid19
— PublicTV (@publictvnews) April 16, 2021