ಹಾವೇರಿ: ಲಾಕ್‍ಡೌನ್ ಬಗ್ಗೆ ಈಗಾಗಲೆ ಸಿಎಂ ಹೇಳಿದ್ದಾರೆ. ಇದು ಲಾಕ್‍ಡೌನ್ ಅಲ್ಲ, ಕೆಲವು ನಿರ್ಬಂಧಗಳ ಜೊತೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಕಳೆದ ಮೂರು ದಿನಗಳಿಂದ ಯಾವ ನಿರ್ಬಂಧಗಳಿವೆಯೋ ಅವುಗಳು ಎರಡು ವಾರಕ್ಕಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೋವಿಡ್ ಸ್ಥಿತಿಗತಿ ಕುರಿತು ನಗರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಎರಡು ವಾರ ಮುಗಿಯೋ ಪೂರ್ವದಲ್ಲಿ ರಾಜ್ಯಮಟ್ಟದ ಕೋವಿಡ್ ತಜ್ಞರ ಸಮಿತಿ ಹಾಗೂ ಟಾಸ್ಕ್ ಫೋರ್ಸ್ ನವರು ಅವಲೋಕನ ಮಾಡುತ್ತಾರೆ. ಕೊರೊನಾ ಕಡಿಮೆ ಆಗಿದೆಯೋ ಇಲ್ಲವೋ ಎಂಬುದನ್ನು ಅವಲೋಕನ ಮಾಡುತ್ತಾರೆ. ಅದರ ಆಧಾರದ ಮೇಲೆ ನಿರ್ಬಂಧಗಳ ವಿಸ್ತರಣೆ ಬಗ್ಗೆ ಟಾಸ್ಕ್ ಫೋರ್ಸ್ ಹಾಗೂ ತಜ್ಞರ ಸಮಿತಿ ನಿರ್ಧಾರ ಮಾಡುತ್ತದೆ ಎಂದರು.
ತಜ್ಞರು ತಮ್ಮ ನಿರ್ಧಾರ ತಿಳಿಸುವ ವರೆಗೆ ಈಗಿರುವ ನಿರ್ಬಂಧಗಳು ಇರುತ್ತವೆ. ಜನರು ಸಹ ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.