ಬೆಂಗಳೂರು: ಕೊರೊನಾ ಮಹಾಮಾರಿಗೆ ರಾಜ್ಯ ಮತ್ತೆ ತತ್ತರಿಸಿ ಹೋಗಿದ್ದು, ಇಂದು ಬರೋಬ್ಬರಿ 20 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್ ಸಾವಿನ ಸಂಖ್ಯೆ 246ಕ್ಕೇರಿದೆ.
ರಾಜ್ಯ ಆರೋಗ್ಯ ಇಲಾಖೆ ಬುಲೆಟಿನ್ ಮಾಹಿತಿ ಅನ್ವಯ ಬಳ್ಳಾರಿಯಲ್ಲಿ 31 ವರ್ಷದ ಮಹಿಳೆ ಸೇರಿದಂತೆ 6 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಉಳಿದಂತೆ ಬೆಂಗಳೂರಿನಲ್ಲಿ 4, ಹಾವೇರಿ, ಧಾರವಾಡ, ವಿಜಯಪುರದಲ್ಲಿ ತಲಾ 2, ಕೋಲಾರ, ದಾವಣಗೆರೆ, ಬೆಳಗಾವಿ, ಮೈಸೂರು ಜಿಲ್ಲೆಗಳಲ್ಲಿ ತಲಾ ಒಂದು ಕೋವಿಡ್ ಸಾವಿನ ಪ್ರಕರಣ ವರದಿಯಾಗಿದೆ.
Advertisement
ರಾಜ್ಯದ ಕೋವಿಡ್ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಒಟ್ಟು 271 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರ ಒಂದರಲ್ಲೇ 171 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ಸಾವನ್ನಪ್ಪಿದವರ ವಿವರ:
ಬಳ್ಳಾರಿಯ 31 ವರ್ಷದ ಮಹಿಳೆ ರೋಗಿ-7840 ಸೇರಿದಂತೆ 6 ಮಂದಿ (ರೋಗಿ-11304, ರೋಗಿ-13509, ರೋಗಿ-14727, ರೋಗಿ-14732, ರೋಗಿ-14733)ಕೊರೊನಾಗೆ ಬಲಿಯಾಗಿದ್ದಾರೆ.
Advertisement
ಬೆಂಗಳೂರಿನಲ್ಲಿ ರೋಗಿ-11528 45 ವರ್ಷದ ಪುರುಷ, ರೋಗಿ-11528 45 ವರ್ಷದ ಪುರುಷ, ರೋಗಿ-13,611 64 ವರ್ಷದ ವೃದ್ಧೆ, ರೋಗಿ-14034 50 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಹಾವೇರಿಯಲ್ಲಿ ರೋಗಿ-8295 75 ವರ್ಷದ ವೃದ್ಧೆ, ರೋಗಿ-13268 60 ವರ್ಷದ ವೃದ್ಧೆ ಸಾವನ್ನಪ್ಪಿದ್ದು, ಧಾರವಾಡದಲ್ಲಿ ರೋಗಿ-10375 83 ವರ್ಷದ ವೃದ್ಧ, ರೋಗಿ-14535 69 ವರ್ಷದ ವೃದ್ಧ ಕೋವಿಡ್‍ಗೆ ಬಲಿಯಾಗಿದ್ದಾರೆ.
ಉಳಿದಂತೆ ಕೋಲಾರದಲ್ಲಿ ರೋಗಿ-10840 44 ವರ್ಷದ ಪುರುಷ, ದಾವಣಗೆರೆಯಲ್ಲಿ ರೋಗಿ-14411 50 ವರ್ಷದ ಮಹಿಳೆ, ಬೆಳಗಾವಿಯಲ್ಲಿ ರೋಗಿ-14579 32 ವರ್ಷದ ಪುರುಷ, ಮೈಸೂರಿನಲ್ಲಿ ರೋಗಿ-14638 36 ವರ್ಷದ ಪುರುಷ ಕೋವಿಡ್‍ನಿಂದ ಸಾವನ್ನಪ್ಪಿದ್ದಾರೆ.