– ಬೆಂಗಳೂರಿನಲ್ಲಿ 4,991 ಜನಕ್ಕೆ ಕೋವಿಡ್ ಸೋಂಕು
– ನಾಲ್ಕು ಜಿಲ್ಲೆಗಳಲ್ಲಿ ಇನ್ನೂರರ ಗಡಿ ದಾಟಿದ ಕೋವಿಡ್
ಬೆಂಗಳೂರು: ಕೊರೊನಾ ವೈರಸ್ ದಿನದಿಂದ ದಿನಕ್ಕೆ ತನ್ನ ವೇಗವನ್ನ ಹೆಚ್ಚಿಸಿಕೊಳ್ಳುತ್ತಿದ್ದು, ಇವತ್ತು ರಾಜ್ಯದಲ್ಲಿ 9,976 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ರೌದ್ರ ನರ್ತನ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 6,991 ಜನರು ಸೋಂಕಿಗೆ ತುತ್ತಾಗಿದ್ದಾರೆ.
ಇಂದು 2,794 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ರೆ, 49,254 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಕೊರೊನಾಗೆ 35 ಜನರು ಪ್ರಾಣ ಕಳೆದುಕೊಂಡಿದ್ದು, ಸಾವನ್ನಪ್ಪಿದವರ ಸಂಖ್ಯೆ 12,731ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ 353 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.5.56ಕ್ಕೇರಿಕೆಯಾಗಿದೆ. ಇತ್ತ ಮರಣ ಪ್ರಮಾಣ ಶೇ. 0.50ಕ್ಕೆ ತಲುಪಿದೆ. ರಾಜ್ಯದಲ್ಲಿ ಇದುವರೆಗೂ 10,33,560 ಕೋವಿಡ್ ಪ್ರಕರಣಗಳು ವರದಿಯಾಗಿವೆ. 1,25,390 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 13, ಬಳ್ಳಾರಿ 49, ಬೆಳಗಾವಿ 101, ಬೆಂಗಳೂರು ಗ್ರಾಮಾಂತರ 70, ಬೆಂಗಳೂರು ನಗರ 4,991, ಬೀದರ್ 214, ಚಾಮರಾಜನಗರ 39, ಚಿಕ್ಕಬಳ್ಳಾಪುರ 37, ಚಿಕ್ಕಮಗಳೂರು 38, ಚಿತ್ರದುರ್ಗ 20, ದಕ್ಷಿಣ ಕನ್ನಡ 112, ದಾವಣಗೆರೆ 20, ಧಾರವಾಡ 88, ಗದಗ 11, ಹಾಸನ 90, ಹಾವೇರಿ 12, ಕಲಬುರಗಿ 205, ಕೊಡಗು 10, ಕೋಲಾರ 29, ಕೊಪ್ಪಳ 24, ಮಂಡ್ಯ 58, ಮೈಸೂರು 243, ರಾಯಚೂರು 28, ರಾಮನಗರ 28, ಶಿವಮೊಗ್ಗ 34, ತುಮಕೂರು 204, ಉಡುಪಿ 89, ಉತ್ತರ ಕನ್ನಡ 35, ವಿಜಯಪುರ 50 ಮತ್ತು ಯಾದಗಿರಿಯಲ್ಲಿ 34 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.