ಬೆಂಗಳೂರು: ಕೊರೊನಾ ಸೋಂಕಿತರು ಹೆಚ್ಚಾಗುವದರ ಜೊತೆಗೆ ಸಾವನ್ನಪ್ಪಿದವರ ಸಂಖ್ಯೆಯೂ ಶರವೇಗ ಪಡೆದುಕೊಳ್ಳುತ್ತಿದೆ. ಸರ್ಕಾರ ನಿರ್ಲಕ್ಷ್ಯ ಮತ್ತು ಗೊಂದಲದ ನಿರ್ಧಾರಗಳೇ ಈ ಸಂಖ್ಯೆ ಹೆಚ್ಚಳವಾಗಲು ಕಾರಣ ಎನ್ನಲಾಗುತ್ತಿದೆ. ಸರ್ಕಾರ ಮೊದಲಿನಿಂದಲೂ ತಜ್ಞರ ಸಲಹೆಗಳನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಶುಕ್ರವಾರದ ಬುಲೆಟಿನ್ ಬೆಂಗಳೂರಿಗರು ಬೆಚ್ಚಿ ಬೀಳುವಂತೆ ಮಾಡಿದೆ.
Advertisement
ಶುಕ್ರವಾರ ಪತ್ತೆಯಾದ 138 ಪ್ರಕರಣಗಳಲ್ಲಿ ನಿಗೂಢ ಕೇಸ್ 41 ಆಗಿದೆ. ಅಂದರೆ ಇವರಿಗೆ ಸೋಂಕಿನ ಮೂಲವೇ ಇಲ್ಲ. ಇದು ಬೆಂಗಳೂರು ಪಾಲಿಗೆ ಡೆಡ್ಲಿ ಡೇಂಜರ್ ಆಗಿದೆ. ಇದರ ಜೊತೆ ಉಸಿರಾಟ ತೊಂದರೆಯಿಂದ 30 ಜನ, ವಿಷಮಶೀತ ಜ್ವರದಿಂದ 30 ಜನ ಕೊರೊನಾ ಪೀಡಿರಾಗಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೊರ ರಾಜ್ಯಗಳು ಕಂಟಕವಾದರೆ ಬೆಂಗಳೂರಿಗೆ ನಿಗೂಢ, ಐಎಲ್‍ಐ ಹಾಗೂ ಸಾರಿ ಕೇಸ್‍ಗಳು ಕಂಟಕವಾಗಿ ಕಾಡ್ತಿದೆ. ಇದು ಸಮುದಾಯಗಳಿಗೆ ಸೋಂಕು ಹಬ್ಬಲು ದಾರಿ ಮಾಡಿಕೊಡುತ್ತಿದೆ.
Advertisement
Advertisement
ಜೂನ್ ತಿಂಗಳಲ್ಲೇ ಬೆಂಗಳೂರಲ್ಲಿ ಕೊರೊನಾ ಸಾವು 4 ಪಟ್ಟು ಏರಿಕೆಯಾಗಿದೆ. ಕೇವಲ 19 ದಿನದಲ್ಲಿ ಬೆಂಗಳೂರಲ್ಲಿ 48 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಸರ್ಕಾರದ ನಡೆಯ ಬಗ್ಗೆ ತಜ್ಞರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಕೊರೊನಾಗೆ ಸಂಬಂಧಿಸಿದಂತೆ ಸರ್ಕಾರವನ್ನು ತಜ್ಞರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
Advertisement
ತಜ್ಞರ ಸಪ್ತ ಪ್ರಶ್ನೆ:
1. ಬೆಂಗಳೂರಿನಲ್ಲಿ ಐಎಲ್‍ಐ, ಸಾರಿ ಪ್ರಕರಣಗಳು ಉಲ್ಬಣಿಸಿವೆ. ಸೋಂಕಿನ ಮೂಲ ಸಿಗುತ್ತಿಲ್ಲ. ಅಂದ್ರೆ ಅದು ಸಮುದಾಯಕ್ಕೆ ಹಬ್ಬಿರುವ ಸಂಕೇತ. ಆದ್ರೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಯಾಕೆ?
2. ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಹೆಚ್ಚಳ ಆಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಏಕೆ?
3. ಕೊರೊನಾ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಖಾಲಿ ಇಲ್ಲ. ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಿಲ್ಲ ಯಾಕೆ?
4. ಕೋವಿಡ್ ಕೇರ್ ಸೆಂಟರ್ ಬಗ್ಗೆ ಕೇವಲ ಮಾಧ್ಯಮದಲ್ಲಿ ಮಾತ್ರ ಮಾತನಾಡುತ್ತಿದ್ದೀರಾ? ಎಲ್ಲಿದೆ ಇದರ ಬ್ಲ್ಯೂ ಪ್ರಿಂಟ್? ಕೇಸ್ ಜಾಸ್ತಿಯಾದ ಬಳಿಕ ಶುರುಮಾಡ್ತೀರಾ?
5. ಇಡೀ ಬೆಂಗಳೂರಿಗೆ ಇರೋದು ಬೆರಳಣಿಕೆಯ ಆಂಬ್ಯುಲೆನ್ಸ್, ಬೆರಳಣಿಕೆಯ ಐಸಿಯು ಹೇಗೆ ಮ್ಯಾನೇಜ್ ಮಾಡ್ತೀರಾ?
6. ತರಕಾರಿ ಮಾರೋರಿಗೆ, ಪೊಲೀಸರಿಗೆ, ಹೆಲ್ತ್ ಕೇರ್ ವರ್ಕರ್ಸ್ ಗೆ ಕೊರೊನಾ ಸೋಂಕು ತಗುಲಿದೆ. ಇದೂ ಡೇಂಜರಸ್ ಅಂತಾ ಗೊತ್ತಿದ್ರೂ ಸುಮ್ಮನಿದ್ದೀರಾ ಏಕೆ? ಎಲ್ಲಾ ಕಡೆ ಸಮುದಾಯಗಳ ಪರೀಕ್ಷೆ ಮುಂದಾಗುತ್ತಿಲ್ಲ ಏಕೆ?
7. ದಿನದಿಂದ ದಿನಕ್ಕೆ ಟೆಸ್ಟಿಂಗ್ ಕಡಿಮೆ ಮಾಡಲಾಗ್ತಿದೆ ಏಕೆ? ಇದು ಅಪಾಯಕಾರಿ ಅಲ್ವಾ?