-ಕೊರೊನಾ ರಣವ್ಯೂಹದಲ್ಲಿ ಬೆಂಗಳೂರು-ದಾಖಲೆಯ ಪ್ರಕರಣ
-ನಿಯಂತ್ರಣ ಸಿಗದ ಮಹಾಮಾರಿಗೆ 8,777 ಸಾವು
-ರಾಜ್ಯದಲ್ಲಿ 1,07,737 ಸಕ್ರಿಯ ಪ್ರಕರಣಗಳು
ಬೆಂಗಳೂರು: ರಾಜ್ಯದಲ್ಲಿ ಇಂದು ಮಹಾಮಾರಿ, ರಕ್ಕಸಿ ಹೊಸ ದಾಖಲೆ ಬರೆದಿದ್ದು, ಒಂದೇ ದಿನ 10,453 ಜನರ ದೇಹವನ್ನು ರಾಕ್ಷಸಿ ಕೊರೊನಾ ಸೇರಿದೆ. ಇಂದು ಮಹಾಮಾರಿ 136 ಸೋಂಕಿತರನ್ನು ಬಲಿ ಪಡೆದುಕೊಂಡಿದೆ.
ಇಂದಿನ 29/09/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/XUz3gDCtyn pic.twitter.com/kZ8awsIrk1
— K'taka Health Dept (@DHFWKA) September 29, 2020
Advertisement
ರಾಜ್ಯದಲ್ಲಿ 1,07,737 ಸಕ್ರಿಯ ಪ್ರಕರಣಗಳಿದ್ದು, 815 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 5,92,911ಕ್ಕೆ ಏರಿಕೆಯಾಗಿದ್ದು, 8,777 ಜನರ ಪ್ರಾಣವನ್ನು ಕೋವಿಡ್ ಬಲಿ ಪಡೆದುಕೊಂಡಿದೆ. ಇಂದು ವಿವಿಧ ಆಸ್ಪತ್ರೆಗಳಿಂದ 6,628 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇವತ್ತು 87,475 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
Advertisement
Advertisement
ಇನ್ನು ರಾಜ್ಯದ ರಾಜಧಾನಿ ಬೆಂಗಳೂರು ಕೊರೊನಾ ರಣವ್ಯೂಹದಲ್ಲಿ ಸಿಲುಕಿರೋದು ಖಾತ್ರಿ ಆಗಿದೆ. ಇಂದು ದಾಖಲೆಯ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳು ರಾಜಧಾನಿಯಲ್ಲಿ ಬೆಳಕಿಗೆ ಬಂದಿವೆ. ಕಳೆದ 24 ಗಂಟೆಯಲ್ಲಿ ಸಿಲಿಕಾನ್ ಸಿಟಿಯ 4,868 ಮಂದಿಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದು, 67 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರು ಕೊರೊನಾ ನಗರಿಯಾಗಿ ಬದಲಾಗ್ತಿದೆಯಾ ಎಂದು ಸಾರ್ವಜನಿಕರು ಸರ್ಕಾರವನ್ನು ಪ್ರಶ್ನೆ ಮಾಡುವ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ. ರಾಜಧಾನಿಯ ಒಟ್ಟು ಸೋಂಕಿತರ ಸಂಖ್ಯೆ 2,28,437ಕ್ಕೆ ಏರಿಕೆಯಾಗಿದ್ದು, 46,610 ಸಕ್ರಿಯ ಪ್ರಕರಣಗಳಿವೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 128, ಬಳ್ಳಾರಿ 313, ಬೆಳಗಾವಿ 128, ಬೆಂಗಳೂರು ಗ್ರಾಮಾಂತರ 305, ಬೆಂಗಳೂರು ನಗರ 4,868, ಬೀದರ್ 70, ಚಾಮರಾಜನಗರ 122, ಚಿಕ್ಕಬಳ್ಳಾಪುರ 141, ಚಿಕ್ಕಮಗಳೂರು 177, ಚಿತ್ರದುರ್ಗ 186, ದಕ್ಷಿಣ ಕನ್ನಡ 362, ದಾವಣಗೆರೆ 288, ಧಾರವಾಡ 145, ಗದಗ 111, ಹಾಸನ 475, ಹಾವೇರಿ 75, ಕಲಬುರಗಿ 161, ಕೊಡಗು 57, ಕೋಲಾರ 72, ಕೊಪ್ಪಳ 143, ಮಂಡ್ಯ 259, ಮೈಸೂರು 414, ರಾಯಚೂರು 100, ರಾಮನಗರ 10, ಶಿವಮೊಗ್ಗ 347, ತುಮಕೂರು 297, ಉಡುಪಿ 125, ಉತ್ತರ ಕನ್ನಡ 125, ವಿಜಯಪುರ 138 ಮತ್ತು ಯಾದಗಿರಿಯಲ್ಲಿ 117 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.