ಬೆಂಗಳೂರು: ಸದ್ಯದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಲಾಕ್‍ಡೌನ್ ನ್ನು ಇನ್ನೆರಡು ದಿನ ಮುಂದುವರಿಸಲಾಗುವುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಮಾರ್ಗಸೂಚಿಗಳಂತೆ ಮೇ 19ರವರೆಗೆ ಬಸ್, ಆಟೋ, ಟ್ಯಾಕ್ಸಿ ಸಂಚಾರವಿರಲ್ಲ ಮತ್ತು ಮಾಲ್, ಥಿಯೇಟರ್, ಶಾಲಾ, ಕಾಲೇಜ್, ದೇವಸ್ಥಾನ, ಮಸೀದಿ, ಚರ್ಚ್ ಈ ಹಿಂದಿನಂತೆ ಬಂದ್ ಆಗಲಿವೆ.
Advertisement
ಕೇಂದ್ರ ಮಾರ್ಗಸೂಚಿ ವಿಳಂಬ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನೂ ಎರಡು ದಿನ ಅಥವಾ ಮುಂದಿನ ಆದೇಶದವರೆಗೆ ಯಥಾಸ್ಥಿತಿ ಮುಂದುವರಿಸಲು ರಾಜ್ಯ ಸರ್ಕಾರದಿಂದ ಆದೇಶ ಪ್ರಕಟವಾಗಿದೆ. ಬೆಳಗ್ಗೆಯಿಂದಲೂ ಕೇಂದ್ರದ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಎದುರು ನೋಡುತ್ತಿತ್ತು. ಮಾರ್ಗಸೂಚಿಗಳ ಪ್ರಕಟ ವಿಳಂಬ ಹಿನ್ನೆಲೆಯಲ್ಲಿ ತನ್ನ ವಿವೇಚನೆ ಅಧಿಕಾರ ಬಳಸಿ ಯಥಾಸ್ಥಿತಿ ಮುಂದುವರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Advertisement
ಮೇ 31ರವರೆಗೆ ಲಾಕ್‍ಡೌನ್ ವಿಸ್ತರಣೆhttps://t.co/BRjgFFCHpX#Lockdown4point0 #Lockdown4 #CoronaVirus #COVID19
— PublicTV (@publictvnews) May 17, 2020
Advertisement
ರಾಜ್ಯದಲ್ಲಿ ಯಥಾಸ್ಥಿತಿಯನ್ನ ಮುಂದುವರಿಸುವಂತೆ ಇಲಾಖೆಗಳಿಗೆ, ಡಿಸಿಗಳಿಗೆ, ಜಿಲ್ಲಾ ಎಸ್ಪಿಗಳಿಗೆ ಸೂಚನೆ ನೀಡಲಾಗಿದೆ. ಕೇಂದ್ರದಿಂದ ಲಾಕ್‍ಡೌನ್ 4.0 ಮಾರ್ಗಸೂಚಿ ಪ್ರಕಟವಾದ ಬೆನ್ನಲ್ಲೇ ರಾಜ್ಯ ಸರ್ಕಾರ ತನ್ನ ಆದೇಶವನ್ನು ಹಿಂಪಡೆಯಲಿದೆ.