ರಾಜ್ಯದಲ್ಲಿ ಇಂದು 5,536 ಮಂದಿಗೆ ಕೊರೊನಾ – ಬೆಂಗ್ಳೂರಿನಲ್ಲಿ 1,898 ಜನರಿಗೆ ಸೋಂಕು, 102 ಬಲಿ

Public TV
2 Min Read
Coronavirus 1

– 16 ಜಿಲ್ಲೆಯಲ್ಲಿ 100ಕ್ಕಿಂತ ಅಧಿಕ ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕಳೆದ ಆರು ದಿನಗಳಿಂದ 5 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ಬರುತ್ತಿದೆ. ಇಂದು ಕೂಡ ಒಟ್ಟು 5,536 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ಲಕ್ಷ ಗಡಿ ದಾಟಿದೆ.

ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಅನ್ವಯ ಕೋವಿಡ್ ಸೋಂಕಿತರ ಸಂಖ್ಯೆ 1,07,001ಕ್ಕೆ ಏರಿದೆ. ಇಂದು 102 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 2,055 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

c

ಇಂದು ರಾಜ್ಯದಲ್ಲಿ 2,819 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 1,07,001ಕ್ಕೆ ಸೋಂಕಿತರ ಪೈಕಿ 64,434 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 40,504 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 612 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

df091b11 9bc8 4c8f 9f51 1895b7e98dc6

ಇಂದು 16,340 ರ‍್ಯಾಪಿಡ್ ಟೆಸ್ಟ್, 21,380 ಆರ್‌ಟಿಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು 37,720 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಈ ಮೂಲಕ ಇಂದು ರ‍್ಯಾಪಿಡ್ ಟೆಸ್ಟ್‌ನಲ್ಲಿ ಹೆಚ್ಚಳವಾಗಿದೆ. ಒಟ್ಟು 87,608 ಮಂದಿಗೆ ರ‍್ಯಾಪಿಡ್ ಟೆಸ್ಟ್, 11,55,163 ಮಂದಿಗೆ ಆರ್‌ಟಿಪಿಸಿಆರ್  ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು ಕರ್ನಾಟಕದಲ್ಲಿ 12,42,771 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.

29f88117 bce8 4d2a 9510 1113579d1f6c

ಬೆಂಗಳೂರಿನಲ್ಲಿ ಇಂದು 1,898 ಮಂದಿಗೆ ಸೋಂಕು ದೃಢವಾಗಿದ್ದು, ಇದುವರೆಗೂ 957 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಇನ್ನೂ ಇಂದು 572 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 48,821ಕ್ಕೆ ಏರಿಕೆ ಆಗಿದೆ.

corona 12

ಬಳ್ಳಾರಿಯಲ್ಲಿ 452, ಕಲಬುರಗಿ, 283, ಮೈಸೂರು 220, ಉಡುಪಿ 109, ಧಾರವಾಡ 173, ಬೆಳಗಾವಿ 228, ಕೋಲಾರ 174, ಬೆಂಗಳೂರು ಗ್ರಾಮಾಂತರ 107, ದಕ್ಷಿಣ ಕನ್ನಡ 173, ವಿಜಯಪುರ 153, ದಾವಣಗೆರೆಯಲ್ಲಿ 135 ಮಂದಿಗೆ ಸೋಂಕು ಬಂದಿದೆ. ಒಟ್ಟು 16 ಜಿಲ್ಲೆಯಲ್ಲಿ 100ಕ್ಕಿಂತ ಹೆಚ್ಚಿನ ಜನರಲ್ಲಿ ಸೋಂಕು ಪತ್ತೆಯಾಗಿದೆ.

covid 1

ಬೆಂಗಳೂರಿನಲ್ಲಿ 572, ಬಳ್ಳಾರಿ 529, ಮೈಸೂರು 115, ದಕ್ಷಿಣ ಕನ್ನಡ 200, ವಿಜಯಪುರ 201, ರಾಮನಗರ 117, ರಾಯಚೂರು 131, ಮತ್ತು ಚಿಕ್ಕಬಳ್ಳಾಪುರ 152 ಮಂದಿ ಬಿಡುಗಡೆಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *