ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಂದು ಕೂಡ 4 ಸಾವಿರದ ಗಡಿ ದಾಟಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಅಧಿಕ ಪ್ರಕರಣಗಳು ಕಂಡುಬಂದಿವೆ. ಇಂದು ರಾಜ್ಯದಲ್ಲಿ 4,991 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಮಹಾಮಾರಿಗೆ 6 ಮಂದಿ ಬಲಿಯಾಗಿದ್ದಾರೆ.
ಸದ್ಯ ರಾಜ್ಯದಲ್ಲಿ 34,219 ಸಕ್ರಿಯ ಪ್ರಕರಣಗಳಿದ್ದು, 269 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಸಂಖ್ಯೆ 10,06,229ಕ್ಕೆ ಏರಿಯಾಗಿದೆ. ಇದುವರೆಗೂ ಕೊರೊನಾಗೆ 12,591 ಮಂದಿ ಸಾವನ್ನಪ್ಪಿದ್ದಾರೆ. ಇಂದು 1,631 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.4.19 ಮತ್ತು ಮರಣ ಪ್ರಮಾಣ ಶೇ.0.12ರಷ್ಟಿದೆ. ಇಂದು 1,18,933 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬೆಂಗಳೂರಿನಲ್ಲಿ 3,509 ಮಂದಿಗೆ ಸೋಂಕು ತಗುಲಿದ್ರೆ, ಬೀದರ್, ದಕ್ಷಿಣ ಕನ್ನಡ, ಹಾಸನ, ಕಲಬುರಗಿ, ಮೈಸೂರು ಹಾಗೂ ತುಮಕೂರಿನಲ್ಲಿ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 13, ಬಳ್ಳಾರಿ 34, ಬೆಳಗಾವಿ 35, ಬೆಂಗಳೂರು ಗ್ರಾಮಾಂತರ 69, ಬೆಂಗಳೂರು ನಗರ 3,509, ಬೀದರ್ 126, ಚಾಮರಾಜನಗರ 13, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 47, ಚಿತ್ರದುರ್ಗ 22, ದಕ್ಷಿಣ ಕನ್ನಡ 105, ದಾವಣಗೆರೆ 21, ಧಾರವಾಡ 62, ಗದಗ 16, ಹಾಸನ 102, ಹಾವೇರಿ 8, ಕಲಬುರಗಿ 105, ಕೊಡಗು 3, ಕೋಲಾರ 74, ಕೊಪ್ಪಳ 6, ಮಂಡ್ಯ 58, ಮೈಸೂರು 174, ರಾಯಚೂರು 27, ರಾಮನಗರ 5, ಶಿವಮೊಗ್ಗ 37, ತುಮಕೂರು 142, ಉಡುಪಿ 95, ಉತ್ತರ ಕನ್ನಡ 25, ವಿಜಯಪುರ 30 ಮತ್ತು ಯಾದಗಿರಿಯಲ್ಲಿ 18 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಇಂದಿನ 02/04/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/aAUdn7kNYV @mla_sudhakar @Comm_dhfwka @MDNHM_Kar @KarnatakaVarthe @PIBBengaluru @CovidKarnataka pic.twitter.com/fWyLw4DTDJ
— K'taka Health Dept (@DHFWKA) April 2, 2021