– ರಾಜ್ಯದಲ್ಲಿ ಡಬಲ್ ಮ್ಯೂಟೆಂಟ್ ವೈರಸ್ ಆಟ ಶುರು
– 20 ಜನರಲ್ಲಿದ್ದ ಈ ವೈರಸ್ 62ಕ್ಕೆ ಏರಿಕೆ
ಬೆಂಗಳೂರು: ರಾಜ್ಯದಲ್ಲಿ ಮಾಹಾಮಾರಿ ಕೊರೊನಾ ವೈರಸ್ ಅಟ್ಟಹಾಸ ಮರೆಯುತ್ತಿದ್ದು, ಇಂದು 44,631 ಜನಕ್ಕೆ ಸೋಂಕು ತಗುಲಿದ್ದು, 292 ಸೋಂಕಿತರು ಬಲಿಯಾಗಿದ್ದಾರೆ. ರಾಜ್ಯದಲ್ಲಿ ಡಬಲ್ ಮ್ಯೂಟೆಂಟ್ ವೈರಸ್ ಆಟ ಶುರುವಾಗಿದ್ದು, ಬರೀ 20 ಜನರಲ್ಲಿ ಇದ್ದ ಡಬಲ್ ಮ್ಯೂಟೆಂಟ್ ವೈರಸ್ ಇದೀಗ 62 ಮಂದಿಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಲು ಪ್ರಮುಖ ಕಾರಣವಾಗಿದೆ.
Advertisement
ಇಂದು 24,714 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16,90,934ಕ್ಕೇರಿಕೆ ಕಂಡಿದೆ. ರಾಜ್ಯದಲ್ಲಿ ಇಂದು 292 ಮಂದಿ ಕೊರೊನಾಗೆ ಬಲಿಯಾಗಿದ್ದು, ಈ ಮೂಲಕ ಮೃತರ ಸಂಖ್ಯೆ 16,538ಕ್ಕೆ ಏರಿಕೆ ಕಂಡಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.29.03 ಮತ್ತು ಮರಣ ಪ್ರಮಾಣ ಶೇ.0.65ರಷ್ಟಿದೆ. ರಾಜ್ಯದಲ್ಲಿ 4,64,363 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.
Advertisement
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಾಮಾರಿ ತನ್ನ ರೌದ್ರನರ್ತನ ತೋರುತ್ತಿದ್ದು, ಇಂದು ನಗರದಲ್ಲಿ 20,870 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಅಲ್ಲದೆ 132 ಮಂದಿ ಬಲಿಯಾಗಿದ್ದಾರೆ. ಇಂದು ಕೂಡ ಸ್ಮಶಾನ, ಚಿತಾಗಾರಗಳ ಮುಂದಿನ ಅಂಬುಲೆನ್ಸ್ ಗಳ ಸಾಲು, ಕಣ್ಣೀರು ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.
Advertisement
Advertisement
ಇಂದು ಒಟ್ಟು 1,49,090 ಸ್ಯಾಂಪಲ್ (ರಾಪಿಡ್ 83098+ಆರ್ ಟಿಪಿಸಿಆರ್ 1,40,609) ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬೆಂಗಳುರು ಬಿಟ್ಟರೆ ಮೈಸೂರು ಮತ್ತು ಹಾಸನದಲ್ಲಿ ಇಂದು ಎರಡು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 676, ಬಳ್ಳಾರಿ 1,280, ಬೆಳಗಾವಿ 615, ಬೆಂಗಳೂರು ಗ್ರಾಮಾಂತರ 996, ಬೆಂಗಳೂರು ನಗರ 20,870, ಬೀದರ್ 403, ಚಾಮರಾಜನಗರ 528, ಚಿಕ್ಕಬಳ್ಳಾಪುರ 639, ಚಿಕ್ಕಮಗಳೂರು 735, ಚಿತ್ರದುರ್ಗ 215, ದಕ್ಷಿಣ ಕನ್ನಡ 985, ದಾವಣಗೆರೆ 277, ಧಾರವಾಡ 647, ಗದಗ 191, ಹಾಸನ 2,278, ಹಾವೇರಿ 408, ಕಲಬುರಗಿ 1,162, ಕೊಡಗು 743, ಕೋಲಾರ 600, ಕೊಪ್ಪಳ 585, ಮಂಡ್ಯ 1,508, ಮೈಸೂರು 2,293, ರಾಯಚೂರು 817, ರಾಮನಗರ 529, ಶಿವಮೊಗ್ಗ 803, ತುಮಕೂರು 1,636, ಉಡುಪಿ 556, ಉತ್ತರ ಕನ್ನಡ 822, ವಿಜಯಪುರ 379 ಮತ್ತು ಯಾದಗಿರಿಯಲ್ಲಿ 457 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಇಂದಿನ 04/05/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/iIyVw97Xow @CMofKarnataka @BSYBJP @mla_sudhakar @drashwathcn @RAshokaBJP @BSBommai @CPBlr @PIBBengaluru @KarnatakaVarthe @PIBBengaluru @BBMPCOMM @BlrCityPolice @blrcitytraffic pic.twitter.com/XK1COCVSwA
— K'taka Health Dept (@DHFWKA) May 4, 2021