ರಾಜ್ಯದಲ್ಲಿ ಇಂದು 1,606 ಮಂದಿಗೆ ಕೊರೊನಾ – 31 ಸಾವು

Public TV
2 Min Read
CORONAVIRUS

– ಪಾಸಿಟಿವಿಟಿ ರೇಟ್ ಶೇ.1.40ಕ್ಕೆ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿಕೆಯಾಗ್ತಾ ಇದೆ. ಇಂದು 1606ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಅನ್ಲಾಕ್ ಆದ ನಂತರ ಕೊವಿಡ್ ಕೇಸ್ ಗಳ ಸಂಖ್ಯೆಯಲ್ಲಿ ಕೊಂಚ ಏರಿಳಿಕೆಯಾಗ್ತಿದೆ. ಏರಿಳಿಕೆ ನೋಡ್ತಿದ್ರೆ ಮತ್ತೆ ಕೇಸ್ ಏರಿಕೆ ಆತಂಕ ಮನೆ ಮಾಡಿದೆ. ರಾಜ್ಯದಲ್ಲಿ ಇಂದು 1,606 ಕೇಸ್ ದಾಖಲಾಗಿದ್ದು ಇಂದು ಕೊರೊನಾಗೆ 31 ಮಂದಿ ಬಲಿಯಾಗಿದ್ದಾರೆ. ಪಾಸಿಟಿವಿಟಿ ರೇಟ್ ಕೂಡ ಶೇ.1.40ಕ್ಕೆ ಇಳಿಕೆಯಾಗಿದೆ. ರಾಜ್ಯದಲ್ಲಿ ನೂರು ಮಂದಿಗೆ ಟೆಸ್ಟ್ ಮಾಡಿದ್ರೆ ಒಬ್ಬರು ಅಥವಾ ಇಬ್ಬರಿಗೆ ಪಾಸಿಟಿವ್ ಆಗ್ತಿದೆ. ಉಳಿದ 98 ಜನರಿಗೆ ನೆಗೆಟಿವ್ ಆಗ್ತಿದೆ.

532d2019 91fd 4a5c bc30 d882aec1aa7c

ಬೆಂಗಳೂರಿನಲ್ಲಿ ಕೂಡ ಇಂದು 467 ಕೇಸ್ ದಾಖಲಾಗಿ 03 ಜನ ಕೊರೊನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕೂಡ ಪಾಸಿಟಿವ್ ಕೇಸ್ ಏರಿಕೆ ಆತಂಕ ಶುರುವಾಗಿದೆ. ಇಂದು ರಾಜ್ಯದಲ್ಲಿ 1,937 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಕೂಡ 497 ಜನ ಡಿಸ್ಚಾರ್ಜ್ ಆಗಿದ್ದಾರೆ. ಜೊತೆಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 23,057ಕ್ಕೆ ಏರಿಕೆಯಾಗಿದೆ.

27a0abb0 c1cd 498b bc9e 285b1ffb850b

ರಾಜ್ಯದಲ್ಲಿ ಇಂದು ಬರೋಬ್ಬರಿ 114072 ಟೆಸ್ಟಿಂಗ್ ಆಗಿದೆ. 11,4072 ಟೆಸ್ಟಿಂಗ್ ಆಗಿ ಬರೀ 1,606 ಕೇಸ್ ದಾಖಲಾಗಿರುವುದು ಸದ್ಯಕ್ಕೆ ಕೊರೋನಾ ಕಂಟ್ರೋಲ್ ನಲ್ಲಿ ಇರುವುದು ಗೊತ್ತಾಗಿದೆ. ಅನ್ಲಾಕ್ ಮಧ್ಯೆ ಮತ್ತೆ ಕೇಸ್ ಏರಿಕೆ ಆಗುವ ಆತಂಕ ಇದ್ದು ಎಚ್ಚರಿಕೆ ವಹಿಸಬೇಕಿದೆ. ಇದನ್ನೂ ಓದಿ: ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ- ಇಂದು ರಾತ್ರಿಯೇ ಬೆಂಗ್ಳೂರಿಗೆ ಬಿ.ಎಲ್ ಸಂತೋಷ್

9b6bf62f d4e6 4199 b629 1e635a4b7339

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 0, ಬೆಳಗಾವಿ 69, ಬೆಂಗಳೂರು ಗ್ರಾಮಾಂತರ 17, ಬೆಂಗಳೂರು ನಗರ 467, ಬೀದರ್ 0, ಚಾಮರಾಜನಗರ 54, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 38, ಚಿತ್ರದುರ್ಗ 36, ದಕ್ಷಿಣ ಕನ್ನಡ 357, ದಾವಣಗೆರೆ 11, ಧಾರವಾಡ 8, ಗದಗ 10, ಹಾಸನ 57, ಹಾವೇರಿ 2, ಕಲಬುರಗಿ 0, ಕೊಡಗು 19, ಕೋಲಾರ 28, ಕೊಪ್ಪಳ 0, ಮಂಡ್ಯ 40, ಮೈಸೂರು 162, ರಾಯಚೂರು 2, ರಾಮನಗರ 3, ಶಿವಮೊಗ್ಗ 52, ತುಮಕೂರು 59, ಉಡುಪಿ 78, ಉತ್ತರ ಕನ್ನಡ 19, ವಿಜಯಪುರ 9 ಮತ್ತು ಯಾದಗಿರಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *