– ಆಸ್ಪತ್ರೆಯಿಂದ 9,091 ಮಂದಿ ಡಿಸ್ಚಾರ್ಜ್, 114 ಬಲಿ
ಬೆಂಗಳೂರು: ರಾಜ್ಯದಲ್ಲಿ ಇಂದು 10,913 ಮಂದಿಗೆ ಸೋಂಕು ಬಂದಿದ್ದು, ಆಸ್ಪತ್ರೆಯಿಂದ 9,091 ಮಂದಿ ಬಿಡುಗಡೆಯಾಗಿದ್ದಾರೆ. ಇಂದು 114 ಮಂದಿ ಮೃತಪಟ್ಟಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 6,90,269ಕ್ಕೆ ಏರಿಕೆಯಾಗಿದೆ. ಈ ಪೈಕಿ 5,61,610 ಮಂದಿ ಬಿಡುಗಡೆಯಾಗಿದ್ದು 1,18,851 ಸಕ್ರಿಯ ಪ್ರಕರಣಗಳಿವೆ.
ಇಲ್ಲಿಯವರೆಗೆ ಒಟ್ಟು 9,789 ಮಂದಿ ಮೃತಪಟ್ಟಿದ್ದು ಸದ್ಯ 873 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ 24 ಗಂಟೆಯಲ್ಲಿ 48,618 ಮಂದಿಗೆ ಆಂಟಿಜನ್ ಟೆಸ್ಟ್ ಮಾಡಿಸಿದ್ದು, 60,362 ಮಂದಿಗೆ ಆರ್‌ಟಿ-ಪಿಸಿಆರ್ ಮತ್ತು ಇತ್ಯಾದಿ ಪರೀಕ್ಷೆ ಸೇರಿದಂತೆ ಒಟ್ಟು 1,09,980 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 57,39,530 ಮಂದಿಗೆ ಕೋವಿಡ್ 19 ಪರೀಕ್ಷೆ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ 5,009, ಮೈಸೂರು 826, ದಾವಣಗೆರೆ 450, ಹಾಸನ 489, ತುಮಕೂರು 366, ದಕ್ಷಿಣ ಕನ್ನಡ 376, ಮಂಡ್ಯ 250, ಬೆಳಗಾವಿ 269, ಬೆಂಗಳುರು ಗ್ರಾಮಾಂತರ 242, ಮಂದಿಗೆ ಸೋಂಕು ಬಂದಿದೆ. ಬೆಂಗಳೂರಿನಲ್ಲಿ 335, ಧಾರವಾಡ 93, ಬಳ್ಳಾರಿ 80, ಹಾಸನದಲ್ಲಿ 48 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.