– ಸಾವಿನ ಸಂಖ್ಯೆ 346ಕ್ಕೆ ಏರಿಕೆ
– ಬೆಂಗಳೂರಲ್ಲಿ 161 ಮಂದಿ ಬಲಿ
ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಮಹಾಬ್ಲಾಸ್ಟ್ ಆಗಿದ್ದು, 50 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡಿದೆ. ಅಲ್ಲದೆ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಂಡಿದ್ದು, ಜನರಲ್ಲಿ ಆತಂಕ ಹುಟ್ಟಿಸಿದೆ.
ಇಂದು ಬರೋಬ್ಬರಿ 50,122 ಮಂದಿಗೆ ಸೋಂಕು ತಗುಲಿದ್ದು, 346 ಸೋಂಕಿತರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು 23,106 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 161 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
ಇಂದು 26,841 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17,41,046ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಇಂದು 346 ಮಂದಿ ಕೊರೊನಾಗೆ ಬಲಿಯಾಗಿದ್ದು, ಈ ಮೂಲಕ ಮೃತರ ಸಂಖ್ಯೆ 16,884ಕ್ಕೆ ಏರಿಕೆ ಕಂಡಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.32.28 ಮತ್ತು ಮರಣ ಪ್ರಮಾಣ ಶೇ.0.69ರಷ್ಟಿದೆ. ರಾಜ್ಯದಲ್ಲಿ 4,87,288 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.
ಇಂದು ಒಟ್ಟು 1,55,224 ಸ್ಯಾಂಪಲ್ (ರಾಪಿಡ್ 9,827+ಆರ್ ಟಿಪಿಸಿಆರ್ 1,45,397) ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬೆಂಗಳೂರು ಬಿಟ್ಟರೆ ಮೈಸೂರು ಮತ್ತು ತುಮಕೂರಿನಲ್ಲಿಇಂದು ಎರಡು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 719, ಬಳ್ಳಾರಿ 927, ಬೆಳಗಾವಿ 920, ಬೆಂಗಳೂರು ಗ್ರಾಮಾಂತರ 1,033, ಬೆಂಗಳೂರು ನಗರ 23,106, ಬೀದರ್ 482, ಚಾಮರಾಜನಗರ 542, ಚಿಕ್ಕಬಳ್ಳಾಪುರ 830, ಚಿಕ್ಕಮಗಳೂರು 1009, ಚಿತ್ರದುರ್ಗ 152, ದಕ್ಷಿಣ ಕನ್ನಡ 1,529, ದಾವಣಗೆರೆ 548, ಧಾರವಾಡ 1030, ಗದಗ 189, ಹಾಸನ 1,604, ಹಾವೇರಿ 224, ಕಲಬುರಗಿ 1,097, ಕೊಡಗು 768, ಕೋಲಾರ 1,115, ಕೊಪ್ಪಳ 182, ಮಂಡ್ಯ 1,621, ಮೈಸೂರು 2,790, ರಾಯಚೂರು 427, ರಾಮನಗರ 475, ಶಿವಮೊಗ್ಗ 702, ತುಮಕೂರು 2,335, ಉಡುಪಿ 1,655, ಉತ್ತರ ಕನ್ನಡ 849, ವಿಜಯಪುರ 513 ಮತ್ತು ಯಾದಗಿರಿಯಲ್ಲಿ 739 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನದಲ್ಲಿ ಕರ್ನಾಟಕ ಇಂದು ಒಂದು ಕೋಟಿ ಲಸಿಕೆ ಡೋಸ್ ಪೂರೈಸಿದೆ.
ಮೊದಲನೇ ಡೋಸ್ – 8335626,
ಎರಡನೇ ಡೋಸ್ – 1723523,
ಹಾಗೂ ಕರ್ನಾಟಕದಲ್ಲಿ ಇಂದಿನವರೆಗೆ
17.23 ಲಕ್ಷ ಜನರಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ.
— K'taka Health Dept (@DHFWKA) May 5, 2021