– 1,285 ಮಂದಿಗೆ ಕೊರೊನಾ, 25 ಸಾವು
ಬೆಂಗಳೂರು: ರಾಜ್ಯದಲ್ಲಿ ಇಂದು ಕಡಿಮೆ ಕೋವಿಡ್ ಕೇಸ್‍ಗಳು ದಾಖಲಾಗಿವೆ. ಪಾಸಿಟಿವಿಟಿ ರೇಟ್ ಕೂಡ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಅನ್ಲಾಕ್ ಮಧ್ಯೆ ಕೇಸ್ ಏರಿಕೆ ಆತಂಕ ಇತ್ತು. ಆದರೆ ಅನ್ಲಾಕ್ ಮಧ್ಯೆಯು ಕೂಡ ಕೇಸ್ ಸಂಪೂರ್ಣ ಇಳಿಕೆಯಾಗಿದೆ.
ರಾಜ್ಯದಲ್ಲಿ ಇಂದು 1285 ಕೋವಿಡ್ ಕೇಸ್ ದಾಖಲಾಗಿದ್ದು, 25 ಜನ ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ರೇಟ್ ಸಂಪೂರ್ಣ ಇಳಿಕೆಯಾಗಿದೆ. ಶೇ.0.96 ಗೆ ಇಳಿಕೆಯಾಗಿದೆ. ರಾಜ್ಯದಲ್ಲಿ 100 ಜನರಿಗೆ ಟೆಸ್ಟ್ ಮಾಡಿದ್ರೆ ಒಬ್ಬರಿಗೆ ಪಾಸಿಟಿವ್ ಆಗ್ತಾ ಇದೆ. ಉಳಿದ 99 ಜನರಿಗೆ ನೆಗೆಟಿವ್ ಆಗ್ತಾ ಇದೆ.
Advertisement
Covid cases dip in Karnataka today:
???? New cases in State:1,285
???? New cases in B'lore: 290
???? Positivity rate: 0.96%
???? Discharges: 1,383 (B'lore- 168)
???? Deaths:25 (B'lore- 05)
???? Active cases in State: 24,021
???? Total tests:1,33,030
— Dr Sudhakar K (@mla_sudhakar) August 2, 2021
Advertisement
ಬೆಂಗಳೂರಿನಲ್ಲಿ ಕೂಡ ಕೇಸ್ ಸಂಪೂರ್ಣ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಬರೋಬ್ಬರಿ 290 ಪಾಸಿಟಿವ್ ಕೇಸ್ ದಾಖಲಾಗಿ, 5 ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಕೂಡ ಕೋವಿಡ್ ನಿಯಂತ್ರಣಕ್ಕೆ ಬಂದಿರೋದು ಆತಂಕ ದೂರ ಮಾಡಿದಂತೆ ಇದೆ. ಇದನ್ನೂ ಓದಿ: ಶಾಸಕಿ ಶಶಿಕಲಾ ಜೊಲ್ಲೆಯವರನ್ನು ಡಿಸಿಎಂ ಮಾಡಿ – ವಿಕಲಚೇತನರ ಒತ್ತಾಯ
Advertisement
ರಾಜ್ಯದಲ್ಲಿ ಇಂದು 1,383 ಜನ ಡಿಸ್ಚಾರ್ಜ್ ಆಗಿದ್ದು, ಇನ್ನೂ ಸಕ್ರಿಯ ಪ್ರಕರಣಗಳ ಸಂಖ್ಯೆ 24021ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಕೂಡ 168 ಜನ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 133030 ಟೆಸ್ಟಿಂಗ್ ಆಗಿದ್ದು, ಒಂದೂವರೆ ಸಾವಿರದ ಒಳಗಡೆ ಕೇಸ್ ದಾಖಲಾಗಿರೋದು ರಾಜ್ಯದಲ್ಲಿ ಕೊರೋನಾ ನಿಯಂತ್ರಣದಲ್ಲಿ ಇರೋದು ಖಚಿತವಾಗಿದೆ.
Advertisement
ಇಂದಿನ 02/08/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/z7GUgmhydL @CMofKarnataka @BSBommai @Comm_dhfwka @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/tqd6grWcG3
— K'taka Health Dept (@DHFWKA) August 2, 2021
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 6, ಬಳ್ಳಾರಿ 4, ಬೆಳಗಾವಿ 24, ಬೆಂಗಳೂರು ಗ್ರಾಮಾಂತರ 13, ಬೆಂಗಳೂರು ನಗರ 290, ಬೀದರ್ 3, ಚಾಮರಾಜನಗರ 17, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 36, ಚಿತ್ರದುರ್ಗ 18, ದಕ್ಷಿಣ ಕನ್ನಡ 219, ದಾವಣಗೆರೆ 4, ಧಾರವಾಡ 8, ಗದಗ 9, ಹಾಸನ 91, ಹಾವೇರಿ 1, ಕಲಬುರಗಿ 5, ಕೊಡಗು 81, ಕೋಲಾರ 35, ಕೊಪ್ಪಳ 2, ಮಂಡ್ಯ 26, ಮೈಸೂರು 102, ರಾಯಚೂರು 1, ರಾಮನಗರ 3, ಶಿವಮೊಗ್ಗ 34, ತುಮಕೂರು 73, ಉಡುಪಿ 135, ಉತ್ತರ ಕನ್ನಡ 41, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.