-ಮೈಸೂರಿನಲ್ಲಿ ಒಂದೇ ದಿನ 1,514 ಮಂದಿಗೆ ಸೋಂಕು
ಬೆಂಗಳೂರು: ರಾಜ್ಯದಲ್ಲಿಂದ 9,886 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6,30,516ಕ್ಕೆ ಏರಿಕೆಯಾಗಿದ್ದು, 1,12,783 ಸಕ್ರಿಯ ಪ್ರಕರಣಗಳಿವೆ.
ಇಂದು ಕೊರೊನಾಗೆ 100 ಸೋಂಕಿತರು ಪ್ರಾಣ ಕಳೆದುಕೊಂಡಿದ್ದು, ಸಾವನ್ನಪ್ಪಿದವರ ಸಂಖ್ಯೆ 9,219ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದ ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ 841 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಇಂದು 8,989 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮೈಸೂರು ಜಿಲ್ಲೆಯಲ್ಲಿಂದು 1,514 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 36,291ಕ್ಕೆ ಏರಿಕೆಯಾಗಿದೆ. ಮೈಸೂರು ಜಿಲ್ಲೆಯಲ್ಲಿ ಇದುವರೆಗೂ ಕೊರೊನಾಗೆ 798 ಸೋಂಕಿತರು ಸಾವನ್ನಪ್ಪಿದ್ದು, 7,028 ಸಕ್ರಿಯ ಪ್ರಕರಣಗಳಿವೆ.
Today's Media Bulletin 03/10/2020.
Please click on the link below to view bulletin.@readingkafka @IasAlok @DeccanHerald @anusharavi10 @D_Roopa_IPS @iaspankajpandey @Tejasvi_Surya @BBMP_MAYOR @BBMPCOMM @mla_sudhakar @RAshokaBJP @Ratnaprabha_IAShttps://t.co/EvWLmZg3NG pic.twitter.com/qzqVWtb8ha
— K'taka Health Dept (@DHFWKA) October 3, 2020
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 88, ಬಳ್ಳಾರಿ 253, ಬೆಳಗಾವಿ 258, ಬೆಂಗಳೂರು ಗ್ರಾಮಾಂತರ 283, ಬೆಂಗಳೂರು ನಗರ 3,925, ಬೀದರ್ 14, ಚಾಮರಾಜನಗರ 179, ಚಿಕ್ಕಬಳ್ಳಾಪುರ 234, ಚಿಕ್ಕಮಗಳೂರು 175, ಚಿತ್ರದುರ್ಗ 76, ದಕ್ಷಿಣ ಕನ್ನಡ 258, ದಾವಣಗೆರೆ 129, ಧಾರವಾಡ 98, ಗದಗ 32, ಹಾಸನ 460, ಹಾವೇರಿ 71, ಕಲಬುರಗಿ 107, ಕೊಡಗು 37, ಕೋಲಾರ 20, ಕೊಪ್ಪಳ 98, ಮಂಡ್ಯ 206, ಮೈಸೂರು 1,514, ರಾಯಚೂರು 199, ರಾಮನಗರ 199, ಶಿವಮೊಗ್ಗ 58, ತುಮಕೂರು 302, ಉಡುಪಿ 158, ಉತ್ತರ ಕನ್ನಡ 92, ವಿಜಯಪುರ 97 ಮತ್ತು ಯಾದಗಿರಿಯಲ್ಲಿ 128 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.