-4,670 ಜನರು ಡಿಸ್ಚಾರ್ಜ್, 107 ಸಾವು
ಬೆಂಗಳೂರು: ರಾಜ್ಯದಲ್ಲಿಂದು 5,985 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,78,087ಕ್ಕೆ ಏರಿಕೆಯಾಗಿದೆ.
ಇಂದು ಒಟ್ಟು 4,670 ಜನರು ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ರಾಜ್ಯದಲ್ಲಿ 80,973 ಸಕ್ರಿಯ ಪ್ರಕರಣಗಳಿವೆ. ಸಾವಿನಲ್ಲಿ ಸೆಂಚೂರಿ ಬಾರಿಸಿರುವ ಮಾಹಾಮಾರಿಗೆ 107 ಜನರು ಬಲಿಯಾಗಿದ್ರೆ, 678 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ 3,198 ಸೋಂಕಿತರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 1,948, ಮೈಸೂರು 455, ಬಳ್ಳಾರಿ 380, ಉಡುಪಿ 282, ಬೆಳಗಾವಿ 235, ರಾಯಚೂರು 202, ಧಾರವಾಡ 196, ಕಲಬುರಗಿ 194, ಹಾಸನ 168, ದಾವಣಗೆರೆ 158, ಬಾಗಲಕೋಟೆ 149, ಶಿವಮೊಗ್ಗ 149, ದಕ್ಷಿಣ ಕನ್ನಡ 132, ವಿಜಯಪುರ 129, ಗದಗ 114, ಚಿಕ್ಕಮಗಳೂರು 113, ಕೊಪ್ಪಳ 106, ಚಿತ್ರದುರ್ಗ 98, ಬೆಂಗಳೂರು ಗ್ರಾಮಾಂತರ 95, ಯಾದಗಿರಿ 91, ಕೋಲಾರ 87, ಹಾವೇರಿ 80, ತುಮಕೂರು 78, ಬೀದರ್ 70, ಮಂಡ್ಯ 63, ಉತ್ತರ ಕನ್ನಡ 59, ಚಿಕ್ಕಬಳ್ಳಾಪುರ 47, ಚಾಮರಾಜನಗರ 47, ರಾಮನಗರ 38 ಮತ್ತು ಕೊಡಗು ಜಿಲ್ಲೆಯಲ್ಲಿ 22 ಪ್ರಕರಣಗಳು ದಾಖಲಾಗಿವೆ.
Advertisement