ಬೆಂಗಳೂರು: ರಾಜ್ಯದಲ್ಲಿಂದು 2,116 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 36,368 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ 8,55,912ಕ್ಕೆ ಏರಿಕೆಯಾಗಿದ್ದು, 29,470 ಸಕ್ರಿಯ ಪ್ರಕರಣಗಳಿವೆ. ಇಂದು ಕೊರೊನಾಗೆ ರಾಜ್ಯದಲ್ಲಿ 21 ಸೋಂಕಿತರು ಸಾವನ್ನಪ್ಪಿದ್ದು, 797 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾಗೆ ಇದುವರೆಗೂ ರಾಜ್ಯದಲ್ಲಿ 11,474 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
Advertisement
Advertisement
ಕೋವಿಡ್-19 ಖಚಿತ ಪ್ರಕರಣ ಸಂಖ್ಯೆ ಶೇ.1.83ರಷ್ಟಿದ್ದು, ಮರಣ ಪ್ರಮಾಣ ಶೇ.0.99ಕ್ಕೆ ಇಳಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 1,15,386 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 1,069 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 3,54,215ಕ್ಕೆ ಏರಿಕೆಯಾಗಿದೆ. ಇಂದು ಕೊರೊನಾಗೆ 8 ಜನ ಮೃತಪಟ್ಟಿದ್ದು, ಸಿಲಿಕಾನ್ ಸಿಟಿಯಲ್ಲಿ 17,942 ಸಕ್ರಿಯ ಪ್ರಕರಣಗಳಿವೆ.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 14, ಬಳ್ಳಾರಿ 41, ಬೆಳಗಾವಿ 54, ಬೆಂಗಳೂರು ಗ್ರಾಮಾಂತರ 43, ಬೆಂಗಳೂರು ನಗರ 1,069, ಬೀದರ್ 3, ಚಾಮರಾಜನಗರ 12, ಚಿಕ್ಕಬಳ್ಳಾಪುರ 24, ಚಿಕ್ಕಮಗಳೂರು 37, ಚಿತ್ರದುರ್ಗ 41, ದಕ್ಷಿಣ ಕನ್ನಡ 53, ದಾವಣಗೆರೆ 29, ಧಾರವಾಡ 18, ಗದಗ 5, ಹಾಸನ 100, ಹಾವೇರಿ 6, ಕಲಬುರಗಿ 51, ಕೊಡಗು 8, ಕೋಲಾರ 18, ಕೊಪ್ಪಳ 28, ಮಂಡ್ಯ 74, ಮೈಸೂರು 115, ರಾಯಚೂರು 9, ರಾಮನಗರ 12, ಶಿವಮೊಗ್ಗ 51, ತುಮಕೂರು 80, ಉಡುಪಿ 31, ಉತ್ತರ ಕನ್ನಡ 32, ವಿಜಯಪುರ 51 ಮತ್ತು ಯಾದಗಿರಿಯಲ್ಲಿ 7 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.