– ಇಂದು 113 ಜನ ಬಲಿ ಪಡೆದ ಮಹಾಮಾರಿ
ಬೆಂಗಳೂರು: ರಾಜುಯದಲ್ಲಿ ಇಂದು ಕೊರೊನಾ ಸ್ಫೋಟವಾಗಿದ್ದು, ಒಟ್ಟು 7,883 ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 19,64,494ಕ್ಕೆ ಏರಿಕೆಯಾಗಿದೆ.
Advertisement
ಇಂದು 7,883 ಕೊರೊನಾ ಪ್ರಕಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 80,343ಕ್ಕೆ ಏರಿಕೆಯಾಗಿದೆ. 701 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 113 ಜನ ಕೊರೊನಾ ಬಲಿಯಾಗಿದ್ದು, ಒಟ್ಟು 3,510 ಜನರನ್ನು ಮಹಾಮಾರಿ ಬಲಿ ಪಡೆದಿದೆ. ಇಂದು 7,034 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವರೆಗೆ ಒಟ್ಟು 1,12,633 ಜನ ಡಿಸ್ಚಾರ್ಜ್ ಆಗಿದ್ದಾರೆ.
Advertisement
Advertisement
ಇಂದು 53,326 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಈ ವೆರೆಗೆ ಒಟ್ಟು 18,26,317ಜನರನ್ನು ಪರೀಖ್ಷೆಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಶೇ.57.32ರಷ್ಟಿದೆ.
Advertisement
ಎಂದಿನಂತೆ ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕಣಗಳು ಪತ್ತೆಯಾಗಿದ್ದು, 2,802 ಜನರಿಗೆ ಸೋಂಕು ತಗುಲಿದೆ. ಬಳ್ಳಾರಿಯಲ್ಲಿ 635, ಮೈಸೂರು, 544, ಬೆಳಗಾವಿ 314, ಧಾರವಾಡ 269, ಉಡುಪಿ 263, ಹಾಸನ 258, ದಾವಣಗೆರೆ 239, ದಕ್ಷಿಣ ಕನ್ನಡ 229, ಕೊಪ್ಪಳ 202 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಮೃತಪಟ್ಟವರ ಪೈಕಿ ಬೆಂಗಳೂರಿನಲ್ಲಿ 23, ಬಳ್ಳಾರಿ 9, ಮೈಸೂರು 11, ಬೆಳಗಾವಿ 6, ದಕ್ಷಿಣ ಕನ್ನಡ 7, ಹಾಸನ 6, ದಾವಣಗೆರೆ ಯಲ್ಲಿ 6 ಜನ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 2,360, ಬಳ್ಳಾರಿಯಲ್ಲಿ 380, ಮೈಸೂರಿನಲ್ಲಿ 668, ದಕ್ಷಿಣ ಕನ್ನಡದಲ್ಲಿ 498, ಕಲಬುರಗಿ 334, ಉಡುಪಿ 225 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.