ಬೆಂಗಳೂರು: ಸಂಪೂರ್ಣ ಲಾಕ್‍ಡೌನ್ ಮಾಡುವ ಕುರಿತು ರಾಜ್ಯ ಸರ್ಕಾರ ಹಿಂದೇಟು ಹಾಕಿದ್ದು, ಇದಕ್ಕೆ ಬದಲಾಗಿ ಇಡೀ ರಾಜ್ಯಕ್ಕೇ ಬೇರೆ ನಿಯಮ ಹಾಗೂ ಬೆಂಗಳೂರಿನಲ್ಲಿ ಲಾಕ್‍ಡೌನ್ ಬದಲು ಲಾಕ್ ರೂಲ್ಸ್ ಜಾರಿಗೆ ತರಲು ನಿರ್ಧರಿಸಿದೆ. ಹೀಗಾಗಿ ಲಾಕ್ ರೂಲ್ಸ್ ಜಾರಿಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.
Advertisement
ಈ ಕುರಿತು ಕಂದಾಯ ಸಚಿವ ಆರ್.ಅಶೋಕ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ನಾಳೆ ಸಂಜೆ ಸಿಎಂ ಜೊತೆ ಚರ್ಚೆ ಮಾಡಿ ಟಫ್ ರೂಲ್ಸ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ರಾಜ್ಯಕ್ಕೆ ಕಾಮನ್ ರೂಲ್ಸ್ ಇರುತ್ತೆ. ಆದರೆ ಬೆಂಗಳೂರಿಗೆ ಪ್ರತ್ಯೇಕ ಬಿಗಿ ರೂಲ್ಸ್ ಇರುತ್ತೆ. ಯಾವ ರೀತಿಯ ರೂಲ್ಸ್ ಎನ್ನುವುದನ್ನು ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡತ್ತೇವೆ. ನಾಳೆ ಬೆಂಗಳೂರು, ಸಚಿವರು, ಶಾಸಕರ ಸಭೆ ಬಳಿಕ ಸಿಎಂ ಜೊತೆಯೂ ಪ್ರತ್ಯೇಕವಾಗಿ ದೂರವಾಣಿ ಮೂಲಕ ಮಾತುಕತೆ ನಡೆಸುತ್ತೇವೆ ಎಂದರು. ಈ ಮೂಲಕ ಮಂಗಳವಾರದಿಂದ ಟಫ್ ರೂಲ್ಸ್ ಜಾರಿಗೆ ಬರುತ್ತೆ ಎಂಬ ಮುನ್ಸೂಚನೆ ನೀಡಿದರು. ಇದನ್ನೂ ಓದಿ: ಲಾಕ್‌ಡೌನ್ ಮಾಡಲ್ಲ, ಬೆಂಗಳೂರಿನಲ್ಲಿ ಕಠಿಣ ಕ್ರಮ ಜಾರಿ – ಸುಧಾಕರ್
Advertisement
Advertisement
ಸಿನಿಮಾ ಹಾಲ್, ಜಿಮ್, ಮಾರ್ಕೆಟ್, ಮದುವೆ, ಸಮಾರಂಭಗಳಿಗೂ ಬ್ರೇಕ್ ಹಾಕಬೇಕಾಗುತ್ತೆ. ಜನರು ಕೂಡ ಸರ್ಕಾರದ ಟಫ್ ರೂಲ್ಸ್ ಗೆ ಸಹಕರಿಸಬೇಕು. ಕಳೆದ ಲಾಕ್‍ಡೌನ್ ನಿಂದ ಇನ್ನೂ ಸುಧಾರಿಸಿಕೊಳ್ಳಲು ಆಗಿಲ್ಲ, ಹಲವು ಅಂಗಡಿಗಳು ಮುಚ್ಚಿವೆ. ಹೀಗಾಗಿ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಸರ್ಕಾರ ರೂಲ್ಸ್ ಜಾರಿಗೆ ತರುತ್ತೆ. ಅಲ್ಲದೆ ಬೇರೆ ದೇಶಗಳಲ್ಲಿ ಈಗಾಗಲೇ 3ನೇ ಅಲೆ ಶುರುವಾಗಿದೆ. ಇಂದು ನಾವು, ಮಾಸ್ಕ್ ಧರಿಸಿ, ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ 3ನೇ ಅಲೆ ತಡೆಯಬಹದು. ಇಲ್ಲವಾದಲ್ಲಿ 3ನೇ ಅಲೆ ಇನ್ನೂ ಕಷ್ಟವಾಗುತ್ತದೆ ಎಂದು ತಿಳಿಸಿದರು.
Advertisement
ಈ ಮೂಲಕ ಪೂರ್ಣ ಪ್ರಮಾಣದ ಲಾಕ್ ಡೌನ್‍ಗೆ ಸರ್ಕಾರ ಹಿಂದೇಟು ಹಾಕಿದ್ದು, ವಿನಾಯಿತಿ ನೀಡಿ ಲಾಕ್ ರೂಲ್ಸ್ ಜಾರಿಗೆ ತರಲು ಮುಂದಾಗಿದೆ. ಬೆಂಗಳೂರಲ್ಲಿ ವಿನಾಯಿತಿ ಲಾಕ್ ರೂಲ್ಸ್ ಜಾರಿ ಬಹುತೇಕ ಖಚಿತವಾಗಿದೆ.