ಬೆಂಗಳೂರು: ಡೆಲ್ಟ್ ಪ್ಲಸ್ ಆತಂಕದಿಂದಾಗಿ ಮಹರಾಷ್ಟ್ರ ಹಾಗೂ ಕೇರಳದಿಂದ ಬರುವವರ ಮೇಲೆ ವಿಶೇಷ ನಿಗ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ಇದನ್ನೂ ಓದಿ: ಸಮಸ್ತ ಕನ್ನಡಿಗರ ಪಾಲಿಗೆ ಕೆಂಪಾಪುರವೂ ಒಂದು ಶ್ರದ್ಧಾಕೇಂದ್ರ: ಡಿಸಿಎಂ
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಹಾಗೂ ಕೇರಳದಿಂದ ಬರುವವರಿಗೆ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ ಎಂದಿದ್ದಾರೆ. ಡೆಲ್ಟಾ ಪ್ಲಸ್ ಸೋಂಕಿತರು ಸದ್ಯಕ್ಕೆ ಇಬ್ಬರು ಪತ್ತೆಯಾಗಿದ್ದಾರೆ. ಇನ್ನು ವರದಿ ಬರಬೇಕಿದೆ. ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಮಹಾರಾಷ್ಟ್ರ ದಿಂದ ಬರುವವರ ಮೇಲೆ ನಿಗಾ ಇಟ್ಟು, ರ‍್ಯಾಂಡಮ್ ಟೆಸ್ಟ್ ಮಾಡುವಂತೆ ಸೂಚನೆ ನೀಡಿದ್ದೇವೆ ಎಂದಿದ್ದಾರೆ.
Advertisement
Active cases in rest of Karnataka fall below 40k but Bengaluru active cases are stubborn around 65k.
???? New cases in Karnataka: 4272
???? New cases in Bengaluru: 955
???? Today’s Discharges: 6126 (BLR-1174)
???? Today’s Deaths:115 (BLR- 16)
???? Total tests today:165010
— Dr Sudhakar K (@mla_sudhakar) June 26, 2021
Advertisement
ಕೋವಿಡ್ ಲಸಿಕೆ ಪಡೆಯದವರ ಮೇಲೆ ಡೆಲ್ಟಾ ಪ್ಲಸ್ ಹೆಚ್ಚಿನ ಪರಿಣಾಮ ಬೀರುತ್ತೆ. ಇದನ್ನ ತಡೆಯಲು ಲಸಿಕೆಯೊಂದೆ ದಾರಿ. ಎಲ್ಲರು ಲಸಿಕೆಯನ್ನ ಪಡೆಯಬೇಕು. ಗಡಿ ಭಾಗದಲ್ಲಿ ಈ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿಗಾವಹಿಸುವಂತೆ ಆದೇಶ ಹೊರಡಿಸಿದ್ದೇವೆ. ವ್ಯಾಕ್ಸಿನ್ ಎಲ್ಲಾ ಕಡೆ ಕೊಡಲಾಗುತ್ತಿದೆ. ಬೆಂಗಳೂರು ಒಂದರಲ್ಲೇ ಸುಮಾರು 50 ಲಕ್ಷಮಂದಿ ಡೋಸ್ ಪಡೆದಿದ್ದಾರೆ. ದೇಶದಲ್ಲೇ ಇದೇ ಹೆಚ್ಚು ಲಸಿಕೆ ಪಡೆದ ಸಿಟಿಯಾಗಿದೆ ಎಂದಿದ್ದಾರೆ.
Advertisement
PM @narendramodi Govt will procure 135 crore doses of vaccine between August’21 and Dec’21 PM
???? Covishield: 50 crore,
????Covaxin: 40 crore
???? Bio E sub unit vaccine: 30 crore
???? Zydus Cadila DNA vaccine: 5 crore
???? Sputnik-V: 10 crore#LargestVaccineDrive#VaccineForAll
— Dr Sudhakar K (@mla_sudhakar) June 27, 2021
Advertisement
10 ವರ್ಷದ ಮಕ್ಕಳ ಪೋಷಕರಿಗೆ ಲಸಿಕೆ ನೀಡುತ್ತೇವೆ. 10 ವರ್ಷದ ಮಕ್ಕಳು ಶಾಲೆಗೆ ತೆರಳು ಸಾಧ್ಯತೆ ಬಂದರೆ ಅವರ ಪೋಷಕರಿಗೆ ಲಸಿಕೆ ನೀಡುತ್ತೇವೆ. ಕೇರಳ ಹಾಗೂ ಮಹಾರಾಷ್ಟ್ರ ಗಡಿಭಾಗದಲ್ಲಿ ಆರ್ ಟಿಪಿಸಿಆರ್ ಕಡ್ಡಾಯವಾಗಿದೆ. ಹೀಗಾಗಿ ಗಡಿಭಾಗದಲ್ಲಿ ಕಟ್ಟೆಚ್ಚೇರ ವಹಿಸುತ್ತೇವೆ ಎಂದಿದ್ದಾರೆ.