ಬೆಂಗಳೂರು: ರಾಜ್ಯ ಕೊರೊನಾ ಮೂರನೇ ಅಲೆಯ ಹೊಸ್ತಿಲಿನಲ್ಲಿದೆ. ಇದಕ್ಕೆ ನೆರೆಯ ಕೇರಳ ರಾಜ್ಯದ ಬಳುವಳಿ ಹೆಚ್ಚಾಗಿಯೇ ಇರಲಿದೆ. ರಾಜ್ಯದಲ್ಲಿ ಮೂರನೇ ಅಲೆಯ ಆರಂಭಕ್ಕೆ ಮತ್ತು ಕೇಸ್ ಗಳು ಹೆಚ್ಚಾಗೋದಕ್ಕೆ ಕೇರಳ ರಾಜ್ಯ ಕಾರಣವಾಗೋ ಸಾಧ್ಯತೆಗಳು ದಟ್ಟವಾಗಿವೆ. ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೊರೋನಾದಿಂದ ಜೀವನ ಸಾಗಿಸೋದು ಜೀವ ಉಳಿಸಿಕೊಳ್ಳುದು ದೊಡ್ಡ ಸವಾಲ್ ಆಗಿದೆ. ಎರಡನೇ ಅಲೆಯ ಅಂತ್ಯ ಕಾಲಕ್ಕೆ ರಾಜ್ಯ ಬಂದಿದೆ.
Advertisement
ರಾಜ್ಯ ಸರ್ಕಾರ ಕೇರಳದಿಂದ ಬರುವವರಿಗೆ ಕಡ್ಡಾಯ ನೆಗೆಟಿವ್ ರಿಪೋರ್ಟ್ ಅಂತ ಹೇಳಿದೆ. ರಾಜ್ಯದ ಗಡಿಯಲ್ಲಿ ಸೂಕ್ತ ರೀತಿಯಲ್ಲಿ ತಪಾಸಣೆ ಕೂಡ ಆಗ್ತಿದೆ. ಅದರೇ ರಾಜ್ಯಕ್ಕೆ ಕೇರಳದಿಂದ ಪ್ರತಿನಿತ್ಯ ಸಾವಿರಾರು ಜನ ರೈಲಿನ ಮೂಲಕ ಬರುತ್ತಿದ್ದಾರೆ.
Advertisement
Advertisement
ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ 10 ಕ್ಕೂ ಹೆಚ್ಚು ತಂಡಗಳಿಂದ ಕೋವಿಡ್ ಟೆಸ್ಟಿಂಗ್ ಕ್ಯಾಂಪ್ ವ್ಯವಸ್ಥೆ ಮಾಡಿದೆ. ಏಕಕಾಲದಲ್ಲಿ ಸಾವಿರಾರು ಜನ ಟ್ರೈನ್ ಮೂಲಕ ಬರೋದ್ರಿಂದ ಎಲ್ಲರ ನೆಗೆಟಿವ್ ರಿಪೋರ್ಟ್ ಚೆಕ್ ಆಗ್ತಿಲ್ಲ. ಜೊತೆಗೆ ಕೋವಿಡ್ ಟೆಸ್ಟಿಂಗ್ ಕೂಡ ಮಾಡಲು ಆಗುತ್ತಿಲ್ಲ. ಕೆಲ ಪ್ರಯಾಣಿಕರು ಬಿಬಿಎಂಪಿ ಸಿಬ್ಬಂದಿ ಕಣ್ತಪ್ಪಿಸಿ ರೈಲ್ವೆ ನಿಲ್ದಾಣದಿಂದ ಎಸ್ಕೇಪ್ ಆಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ.