ಬಿಗ್‍ಬಾಸ್ ಮನೆಯಲ್ಲಿ ಕೆಲವು ರೂಲ್ಸ್‍ಗಳಿವೆ ಅವುಗಳನ್ನು ಮನೆಯ ಸದಸ್ಯರು ಪಾಲಿಸಬೇಕು. ಇಲ್ಲವಾದರೆ ಬಿಗ್‍ಬಾಸ್ ಕಡೆಯಿಂದ ಎಚ್ಚರಿಕೆ ಗಂಟೆ ಅಥವಾ ಶಿಕ್ಷೆಯನ್ನು ನೀಡುತ್ತಾರೆ.
ಮಳೆ ಜೋರಾಗಿತ್ತು. ಮಳೆಯಲ್ಲಿ ಸ್ಪರ್ಧಿಗಳು ನೆನೆದು ಕುಣಿದು ಕುಪ್ಪಳಿಸಿದ್ದರು. ನಂತರ ಬಿಗ್‍ಬಾಸ್ ಕ್ಯಾಪ್ಟನ್ಸಿ ಟಾಸ್ಕ್ ನಡೆಯುತ್ತಿತ್ತು. ಈ ವೇಳೆ ರಾಜೀವ್ ಮಳೆಯಲ್ಲಿ ನೆನೆದಿರುವುದರಿಂದ ಹಾಗೆ ನಿದ್ದೆಗೆ ಜಾರಿದ್ದಾರೆ. ಆಗ ಬಿಗ್‍ಬಾಸ್ ಎದ್ದೇಳು ಮಜುನಾಥ ಎದ್ದೇಳು ಎಂದು ಸಾಂಗ್ ಹಾಕಿದ್ದಾರೆ. ರಾಜೀವ್ ಕಣ್ಣು ಬಿಟ್ಟು ಎದ್ದು ಕುಳಿತಿದ್ದಾರೆ. ಈ ವೇಳೆ ಮನೆಮಂದಿ ಜೋರಾಗಿ ನಕ್ಕಿದ್ದಾರೆ.
ಬಿಗ್‍ಬಾಸ್ ರೂಲ್ಸ್ ಅಂದ್ರೆನೆ ಹಾಗೇ ಎಲ್ಲರಿಗೂ ಒಂದೇ ಆಗಿರುತ್ತದೆ. ಅದನ್ನು ಎಲ್ಲರೂ ಚಾಚು ತಪ್ಪದೇ ಪಾಲಿಸಬೇಕು. ಈ ಹಿಂದೆ ಬಿಗ್‍ಬಾಸ್ ಮನೆಯ ಕಪ್ ಒಡೆದ ಅರವಿಂದ್, ಮಂಜುಗೆ ಚಿಕ್ಕ ಕಪ್‍ಗಳನ್ನು ಕಳಿಸಿ ಮುಂದಿನ ಆದೇಶದವರೆಗೆ ಇದೆ ಕಪ್‍ಅನ್ನು ಬಳಕೆ ಮಾಡುವಂತೆ ಹೇಳಿದ್ದರು. ಇದೀಗ ರಾಜೀವ್ ನಿದ್ದಗೆ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ.
ಹೀಗೆ ಆಟದ ರೂಲ್ಸ್ ಬುಕ್‍ಅನ್ನು ಸರಿಯಾಗಿ ಓದದೇ ಸ್ಪರ್ಧಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ಅತೀ ಹೆಚ್ಚು ಪ್ರೇಮ ಪತ್ರಗಳನ್ನು ಬರೆದ ಸದಸ್ಯ, ಪ್ರೇಮ ಪತ್ರವಶಪಡಿಸಿಕೊಂಡ ಸದಸ್ಯ, ಪ್ರೇಮ ಪತ್ರಗಳನ್ನು ಸೇವ್ ಮಾಡಿಕೊಂಡ ಸದಸ್ಯ, ಉತ್ತಮ ಆಟಗಾರರು ಕ್ಯಾಪ್ಟನ್ಸಿ ಟಾಸ್ಕ್‍ಗೆ ಅರ್ಹರರಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ನಿಧಿ, ಪ್ರಶಾಂತ್ ಸಂಬರಗಿ ಆಯ್ಕೆಯಲ್ಲಿ ತಪ್ಪು ಮಾಡಿದ್ದರು. ಈ ವಿಚಾರದ ಕುರಿತಾಗಿ ನಿನ್ನೆ ಮನೆಯಲ್ಲಿ ಮನಸ್ಥಾಪದ ಹೊಗೆ ಆಡುತ್ತಿತ್ತು.
ರೂಲ್ಸ್ ಬುಕ್ ಸರಿಯಾಗೊ ಓದಿಕೊಂಡಿದ್ದರೆ ಇನ್ನೊಬ್ಬರಿಗೆ ಅವಕಾಶ ಸಿಗುತ್ತಿತ್ತು ಎಂದು ಸ್ಪರ್ಧಿಗಳು ಮಾತನಾಡಿಕೊಂಡಿದ್ದಾರೆ. ಬಿಗ್‍ಬಾಸ್ ನಿಯಮಗಳು ಸಾಕಷ್ಟಿರುತ್ತವೆ ಅವುಗಳನ್ನು ತಿಳಿದು ಚೆನ್ನಾಗಿ ಆಟ ಆಡಿ ವೀಕ್ಷಕರಿಗೆ ಯಾರು ಮೆಚ್ಚುಗೆಯಾಗುತ್ತಾರೋ ಅವರು ಕೊನೆಯ ಹಂತದವರೆಗೆ ಉಳಿಯುತ್ತಾರೆ.