ಜೈಪುರ: ರಾಜಸ್ಥಾನದಲ್ಲಿ ಬೀಳುವ ಹಂತ ತಲುಪಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಮರುಜೀವ ಸಿಕ್ಕಂತಾಗಿದ್ದು, ಇಂದು ನಡೆದ ವಿಶ್ವಾಸ ಮತದಲ್ಲಿ ಸಿಎಂ ಗೆಹ್ಲೋಟ್ ಜಯಗಳಿಸಿದ್ದು ಇನ್ನು 6 ತಿಂಗಳು ಯಾವುದೇ ಗೊಂದಲ ಇಲ್ಲದೇ ಸರ್ಕಾರ ಆಡಳಿತ ನಡೆಸಲಿದೆ.
ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬಂಡಾಯದ ಬಳಿಕ ಕಳೆದ ಕೆಲ ತಿಂಗಳಿಂದ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅತಂತ್ರವಾಗಿತ್ತು. ಇಂದು ರಾಜಸ್ಥಾನ ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರದ ಪರ 125 ಶಾಸಕರು ಬೆಂಬಲ ಸೂಚಿಸಿದರೆ ಬಿಜೆಪಿ ಪರ 75 ಶಾಸಕರು ಬೆಂಬಲ ಸೂಚಿಸಿದರು.
Advertisement
Advertisement
ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬಂಡಾಯದ ಬಳಿಕ ಬಿಜೆಪಿ ಆಪರೇಷನ್ ಕಮಲ ನೆಡೆಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಇತ್ತೀಚೆಗೆ ಪೈಲಟ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗುವ ಮೂಲಕ ಈ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದರು.
Advertisement
Chief Minister Ashok Gehlot led #Rajasthan Government wins vote of confidence in the State Assembly. pic.twitter.com/csbM85SQnW
— ANI (@ANI) August 14, 2020
Advertisement
ಬಂಡಾಯದ ಬಳಿಕ ಎರಡೂ ತಂಡಗಳ ಶಾಸಕರು ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖಾಮುಖಿಯಾಗಿದ್ದರು. ಸಭೆಯಲ್ಲಿ ವಿಶ್ವಾಸ ಮತಯಾಚನೆ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಇಂದು ಟ್ರಸ್ಟ್ ವೋಟ್ ನಡೆದಿದ್ದು, ರಾಜಸ್ಥಾನ ವಿಧಾನಸಭೆಯಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರ ವಿಶ್ವಾಸ ಮತದಲ್ಲಿ ಜಯಗಳಿಸಿದೆ.
This has put a full stop on all suspicions that were rising. A roadmap has been prepared for all the issues that were being raised. I have complete faith, that roadmap will be announced timely: Congress leader Sachin Pilot https://t.co/DqfoqaWro5
— ANI (@ANI) August 14, 2020
ಈ ಕುರಿತು ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಪ್ರತಿಕ್ರಿಯಿಸಿದ್ದು, ಈ ಗೆಲುವಿನಿಂದಾಗಿ ಎಲ್ಲ ಊಹಾಪೋಹಗಳಿಗೆ ವಿರಾಮ ಬಿದ್ದಂತಾಗಿದೆ. ನಮ್ಮೆಲ್ಲ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ಸಮಯಕ್ಕೆ ಸರಿಯಾಗಿ ಈ ಮಾರ್ಗಸೂಚಿಯಂತೆ ನಡೆದುಕೊಳ್ಳುತ್ತಾರೆಂಬ ಸಂಪೂರ್ಣ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.
The way BJP had conspired in Madhya Pradesh, Karnataka, Maharashtra, Goa, Manipur & Arunachal Pradesh, they applied the same technique in Rajasthan, but they have been exposed: Rajasthan Chief Minister Ashok Gehlot https://t.co/nU0urSUGgC pic.twitter.com/u40uxcxmKk
— ANI (@ANI) August 14, 2020
ಇಂದು ನಡೆದ ಅಧಿವೇಶನದ ಚರ್ಚೆಯ ಸಮಯದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಬಿಜೆಪಿ ಸರ್ಕಾರ ಬೀಳಿಸುವ ಸಂಚು ರೂಪಿಸಿತ್ತು ಎಂದು ವಾಗ್ದಾಳಿ ನಡೆಸಿದರು. ಸಚಿನ್ ಪೈಲೆಟ್ ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ. ಅಮಿತ್ ಶಾ ಪೈಲಟ್ ಅವರನ್ನು ಸಂಪರ್ಕಿಸಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬಂದಿತ್ತು.
Winning trust vote in Assembly is a message to the forces that are trying to destabilize elected govts in country. Their every tactic failed in Rajasthan. It is people’s unwavering trust in us & unity of our Congress MLAs that has brought this victory: Rajasthan CM Ashok Gehlot pic.twitter.com/2yh1SyouLc
— ANI (@ANI) August 14, 2020
ಈ ಸೋಲು ನಿಮಗೆ, ನಿಮ್ಮ ನಾಯಕರಿಗೆ ಆಘಾತವನ್ನುಂಟು ಮಾಡಿದೆ. ಈ ಪಿತೂರಿಯಲ್ಲಿ ಕೇಂದ್ರದ ಹಲವು ನಾಯಕರು ಸಹ ಭಾಗಿಯಾಗಿದ್ದರು. ನೀವು ಉಪಮುಖ್ಯಮಂತ್ರಿ ಬಗ್ಗೆ ಮಾತನಾಡುತ್ತೀರಿ. ಆದರೆ ಈ ಪಿತೂರಿಯನ್ನು ಮಾಡಿದ್ದೇ ನೀವು, ನಿಮ್ಮ ಪಕ್ಷ ಹಾಗೂ ಬಿಜೆಪಿ ಹೈ ಕಮಾಂಡ್ ಎಂದು ಕಾಂಗ್ರೆಸ್ ಟೀಕಿಸಿದೆ.
Rajasthan: Congress MLAs show victory sign after winning the confidence motion in the State Assembly today; Visuals from Hotel Fairmont in Jaipur. pic.twitter.com/iXdFzCEHdS
— ANI (@ANI) August 14, 2020
ವಿಶ್ವಾಸ ಮತಯಾಚನೆ ವೇಳೆ ಸಚಿನ್ ಪೈಲಟ್ ತಮ್ಮ ಭಾಷಣದುದ್ದಕ್ಕೂ ಒಗ್ಗಟ್ಟಿನ ಜಪ ಮಾಡಿದ್ದು, ಕಾಂಗ್ರೆಸ್‍ನಲ್ಲಿದ್ದ ಆಂತರಿಕ ಸಮಸ್ಯೆಗಳೆಲ್ಲವೂ ಬಗೆಹರಿದಿವೆ. ಆಡಳಿತ ಪಕ್ಷ ಒಗ್ಗಟ್ಟಾಗಿ ನಿಲ್ಲಲಿದೆ. ವಿರೋಧ ಪಕ್ಷ ಇದೆಲ್ಲವನ್ನು ಬಿಟ್ಟು ವಿಶ್ವಾಸ ಮತಯಾಚನೆ ಬಗ್ಗೆ ಗಮನಹರಿಸಲಿ ಎಂದು ಹೇಳಿದರು.