ರಾಜರಾಜೇಶ್ವರಿ ನಗರ ಉಪಚುನಾವಣೆ – ಮುನಿರತ್ನಗೆ ಬಿಜೆಪಿಯಿಂದ ಟಿಕೆಟ್‌

Public TV
1 Min Read
Munirathna

ನವದೆಹಲಿ: ರಾಜ್ಯದ ರಾಜ ರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಪಕ್ಷದ‌ ಅಭ್ಯರ್ಥಿಗಳನ್ನು ಬಿಜೆಪಿ ಮಂಗಳವಾರ ಘೋಷಿಸಿದೆ. ಬೆಂಗಳೂರಿನ ರಾಜ ರಾಜೇಶ್ವರಿ ನಗರ ಕ್ಷೇತ್ರದಿಂದ ಅನರ್ಹ ಶಾಸಕ ಮುನಿರತ್ನ ಹಾಗೂ ಶಿರಾ ಕ್ಷೇತ್ರದಿಂದ ಡಾ.ರಾಜೇಶ್ ಗೌಡ ಅವರಿಗೆ ಟಿಕೆಟ್ ಘೋಷಿಸಲಾಗಿದೆ‌.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ‌ ಜೆ.ಪಿ.‌ನಡ್ಡಾ ನಿರ್ದೇಶನದ ಮೇರೆಗೆ ಪಕ್ಷದ ಕೇಂದ್ರ ಚುನಾವಣೆ ಸಮಿತಿಯು ಈ ಅಭ್ಯರ್ಥಿಗಳನ್ನು ಘೋಷಿಸಿ ಆದೇಶ ಹೊರಡಿಸಿದೆ. ಈ ಎರಡೂ ಕ್ಷೇತ್ರಗಳಿಗೆ ನವೆಂಬರ್ 3ರಂದು ಚುನಾವಣೆ ನಡೆಯಲಿದೆ.

ರಾಜರಾಜೇಶ್ವರಿ ಕ್ಷೇತ್ರ ಉಪ ಚುನಾವಣೆಯ ಸಂಬಂಧ  ನಾಳೆ ಬೆಳಗ್ಗೆ 11ಗಂಟೆಗೆ ಮುನಿರತ್ನ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸಹಕಾರ ಖಾತೆಯ ಸಚಿವ ಎಸ್‌ಟಿ ಸೋಮಶೇಖರ್‌ ಇಂದು ಮಧ್ಯಾಹ್ನ ಹೇಳಿದ್ದರು.

BJP SULLAI

ತಾಜ್‌ ವೆಸ್ಟ್‌ ಎಂಡ್‌ ಹೋಟೆಲಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆ ಬೆಳಗ್ಗೆ9.30ಕ್ಕೆ ಮುನಿರತ್ನ ಅವರನ್ನು ಪಕ್ಷದ ಕಚೇರಿಗೆ ಬರಲು ಹೇಳಿದ್ದಾರೆ. 11 ಗಂಟೆಗೆ ಮುನಿರತ್ನ ನಾಮಪತ್ರ ಸಲ್ಲಿಸುತ್ತಾರೆ. ಸಿಎಂ ಯಡಿಯೂರಪ್ಪನವರೇ ಈ ಬಗ್ಗೆ ಅಧಿಕೃತವಾಗಿ ತಿಳಿಸುತ್ತಾರೆ. ಅಭ್ಯರ್ಥಿ ವಿಚಾರವಾಗಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.

ತಾಜ್ ಹೋಟೆಲಿನಲ್ಲಿ ಸಿಎಂ  ಬಿಎಸ್‌ವೈ  ಆಪ್ತ ಸಚಿವರ ಜೊತೆ ಮಧ್ಯಾಹ್ನ ಭೋಜನ ಮಾಡಿದರು. ಸಿಎಂಗೆ ಸಚಿವ ಸೋಮಣ್ಣ , ಆರ್ ಅಶೋಕ್,  ಬಸವರಾಜ್ ಬೊಮ್ಮಾಯಿ, ಮುನಿರತ್ನ, ಎಸ್.ಟಿ.ಸೋಮಶೇಖರ್ ಸಾಥ್ ನೀಡಿದ್ದರು.

Share This Article