– ಪಬ್ಲಿಕ್ ಕ್ಯಾಮೆರಾದಲ್ಲಿ ಕಲ್ಲುಕ್ವಾರಿ ಸ್ಫೋಟದ ದೃಶ್ಯ
ನೆಲಮಂಗಲ: ಶಿವಮೊಗ್ಗ ಗಣಿ ದುರಂತ ಮರುಕಳಿಸಿದರಲಿ ಎಂದು ಗ್ರಾಮವೊಂದು ಪ್ರಾರ್ಥನೆ ಮಾಡುವಂತಹ ಸ್ಥಿತಿಗೆ ಬಂದು ತಲುಪಿದೆ.
Advertisement
ಹೌದು. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಗಡಿ ಗ್ರಾಮವಾದ ಮಾಕೇನಹಳ್ಳಿಯ ಗ್ರಾಮದ ಪಕ್ಕದಲ್ಲಿ 7 ಕರ್ಷರ್ ಗಳಿಂದ ಪ್ರತಿನಿತ್ಯವು ನೂರಾರು ಸ್ಫೋಟ ಭಯಾನಕ ಶಬ್ದ ಕೇಳಿಬಂದು ಸ್ಥಳೀಯ ಮಾಕೇನಹಳ್ಳಿ ನಾಗರಿಕರು ಭಯದಲ್ಲಿ ಕಾಲಕಳೆಯುವಂತಾಗಿದೆ. ಹಗಲು ರಾತ್ತಿಯನ್ನದೆ ವ್ಯಾಪಕವಾಗಿ ನಡೆಯುತ್ತಿದೆ ಕಲ್ಲು ಗಣಿಗಾರಿಕೆಯಿಂದ, ಧೂಳು, ಕೃಷಿ ಚಟುವಟಿಕೆಗೆ ತೊಂದರೆ, ಜಾನುವಾರುಗಳು ಕರ್ಷರ್ ಗುಂಡಿಗಳಿಗೆ ಬಿದ್ದು ಸಾವು, ಗ್ರಾಮದ ಹೊಸ ಮನೆಗಳ ಗೋಡೆಗಳು ಬಿರುಕು ಬಿಟ್ಟೇವೆ ಎಂದು ಗ್ರಾಮಸ್ಥರು ತಮ್ಮ ಕಥೆ-ವ್ಯಥೆ ತಿಳಿಸಿದ್ದಾರೆ.
Advertisement
Advertisement
ಕಲ್ಲುಗಣಿಗಾರಿಕೆಗೆ ಸಂಪೂರ್ಣವಾಗಿ ಬೇಸತ್ತ ಮಾಕೇನಹಳ್ಳಿ ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಎಚ್ಚರಿಕೆ ನೀಡಿದ್ದಾರೆ. ಸತತ 8-10 ವರ್ಷಗಳಿಂದ ಕಲ್ಲುಗಾಣಿಗಾರಿಕೆಯಿಂದ ತನ್ನ ಕಾರ್ಯ ವ್ಯಾಪ್ತಿ ಮುಂದುವರಿಸಿ, ನೂರಾರು ಮನೆಗಳು ಹಾನಿ ಉಂಟು ಮಾಡಿದ್ದಾರೆ. ಇಡೀ ಊರಿನ 150 ಮನೆಗಳ ಗೋಡೆಗಳು ಸಂಪೂರ್ಣ ಬಿರುಕು ಬಿಟ್ಟಿದ್ದು, ಯಾವಾಗ ಮನೆಗಳು ಬೇಳಲಿದೆಯಂಬ ಭಯದಲ್ಲಿ ಗ್ರಾಮಸ್ಥರು ಜೀವನ ನಡೆಸುತ್ತಿದ್ದಾರೆ.
Advertisement
ಮಾಕೇನಹಳ್ಳಿ ಗ್ರಾಮದ ಶಾಲೆ, ಅಂಗನವಾಡಿ, ದೇವಾಲಯ ಕಟ್ಟಡ ಸಹ ಶಿಥಿಲವಾಗಿದ್ದರೂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಸ್ಥಳೀಯ ಪೊಲೀಸರು ಕಣ್ಮುಚ್ಚಿಕೊಳ್ಳುತ್ತಿದ್ದಾರೆ. ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸ್ಥಳೀಯರಿಗೆ ಯಾವುದೇ ಪ್ರಯೋಜನ ವಾಗಿಲ್ಲ. ಗಣಿಗಾರಿಕೆ ನಿಲ್ಲಿಸಿಲ್ಲ. ಇನ್ನು ಕಲ್ಲು ಗಣಿಗಾರಿಕೆಯಿಂದ ಗಾಳಿ ನೀರು ಪರಿಸರ ಸಂಪೂರ್ಣ ಕಲುಷಿತಗೊಂಡು ರೋಗರುಜಿನಗಳ ಉಲ್ಬಣ ವಾಗುತ್ತಿದ್ದು, ಇಡೀ ಕರ್ಮಕಾಂಡ ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದೆ.