ಬೆಂಗಳೂರು: ಅತಿ ಹೆಚ್ಚು ಹೈ ರಿಸ್ಕ್ ಕ್ಯಾಟಗೆರಿ ಇರುವ ನಗರ ಬೆಂಗಳೂರು. ಮೇ 15 ವರೆಗೂ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿತ್ತು. ಮೇ 15 ರ ನಂತರ ಬೆಂಗಳೂರಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಮೂರು ರಾಜ್ಯಗಳು. ಅ ಮೂರು ರಾಜ್ಯಗಳೇ ಬೆಂಗಳೂರಿಗೆ ಕಂಟಕವಾಗಿವೆ.
Advertisement
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 434ಕ್ಕೆ ಏರಿಕೆಯಾಗಿದೆ. ಅದರಲ್ಲಿ 149 ಪ್ರಕರಣಗಳು ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 271 ರೋಗಿಗಳು ಬಿಡುಗಡೆ ಆಗಿದ್ದಾರೆ. ಕೊರೊನಾದಿಂದ ಗುಣಮುಖರಾದವರ ಸಂಖ್ಯೆ ನೋಡಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದು, ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತೆ ಎಂಬ ನಿರೀಕ್ಷೆ ಇತ್ತು. ದೆಹಲಿ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯದಿಂದ ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿವೆ. ಈ ತ್ರಿ ರಾಜ್ಯಗಳ ಕಂಟಕ ಬೆಂಗಳೂರಿಗೆ ಈಗ ಎದುರಾಗಿದೆ. ಈ ಮೂರು ರಾಜ್ಯಗಳಿಂದ ಸಾವಿರಾರು ಜನ ಬಂದಿದ್ದಾರೆ. ಅದರಲ್ಲಿ ದಿನೇ ದಿನ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದ್ದು, ಈ ಮೂರು ರಾಜ್ಯಗಳಿಂದ ಬೆಂಗಳೂರಿಗೆ ಗಂಡಾಂತರ ಕಾದಿದೆಯಾ ಎಂಬ ಆತಂಕ ಶುರುವಾಗಿದೆ.
Advertisement
Advertisement
ಮೇ 15ರ ನಂತರ ಈ ಮೂರು ರಾಜ್ಯಗಳಿಂದ ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಅದರಲ್ಲಿ ಮಹಾ ಪಾಲು ಮುಂಬೈನದ್ದು. ಮೇ 15ರ ನಂತರ ಮುಂಬೈ, ದೆಹಲಿ ಮತ್ತು ತಮಿಳುನಾಡು ಸೇರಿದಂತೆ ಇನ್ನಿತರ ರಾಜ್ಯಗಳಿಂದ ಬಂದವರಲ್ಲಿ ಸೋಂಕು ಪತ್ತೆಯಾಗಿದೆ. ಮುಂಬೈನಿಂದ ಬಂದವರಲ್ಲಿ ದಿನಕ್ಕೆ 5 ರಿಂದ 10 ಜನಕ್ಕೆ ಸೋಂಕು ಕಾಣಿಸಿಕೊಳ್ತಾ ಇದೆ. ತಮಿಳುನಾಡಿನಿಂದ ಬಂದ ಜನರಲ್ಲಿ ಕೂಡ ಸೋಂಕು ಕಾಣಿಸಿಕೊಳ್ಳಲಾರಂಭಿಸಿದೆ.
Advertisement
ಒಟ್ಟಾರೆ ಮೂರು ರಾಜ್ಯಗಳಿಂದ ಸಾವಿರಾರು ಜನ ಬಂದಿದ್ದಾರೆ. ಮಹಾರಾಷ್ಟ್ರದಿಂದ ಬಂದವರನ್ನ ಕ್ವಾರಂಟೈನ್ ಮಾಡಲಾಗಿದೆ. ಉಳಿದ ರಾಜ್ಯದಿಂದ ಬಂದವರನ್ನ ಹೋಮ್ ಕ್ವಾರಂಟೈನ್‍ಗೆ ಸೂಚಿಸಲಾಗಿದೆ.