ಚೆನ್ನೈ: ನಟ ರಜನಿಕಾಂತ್ ತಮ್ಮ ಹೊಸ ಅಧ್ಯಾಯವಾಗಿ ರಾಜಕೀಯ ಪಕ್ಷವನ್ನು ಜನವರಿಯಲ್ಲಿ ಸ್ಥಾಪಿಸುವುದಾಗಿ ಘೋಷಿಸಿಕೊಂಡಿದ್ದರು. ಆದರೆ ಇದೀಗ ದಿಢೀರ್ ಈ ನಿರ್ಧಾರದಿಂದ ಹೊರಬಂದಿರುವ ನಟ, ತಮ್ಮ ಆರೋಗ್ಯ ಸಮಸ್ಯೆಯಿಂದಾಗಿ ಪಕ್ಷ ಸ್ಥಾಪಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
2021ರ ತಮಿಳುನಾಡು ಚುನಾವಣೆಗಾಗಿ ರಾಜಕೀಯ ಪಕ್ಷ ಕಟ್ಟಲು ಹೊರಟಿದ್ದ ತಲೈವಾ, ಕೆಲದಿನಗಳ ಹಿಂದೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಆಸ್ಪತ್ರೆಯಿಂದ ಡಿಸ್ರ್ಟಾಜ್ ಆದ ಬೆನ್ನಲ್ಲೇ ಆರೋಗ್ಯ ಸಮಸ್ಯೆ ದೇವರ ಎಚ್ಚರಿಕೆಯಾಗಿದೆ. ಹಾಗಾಗಿ ನನ್ನನ್ನು ನಂಬುವ ಜನರನ್ನು ಬಲಿಪಶು ಮಾಡಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಮೂತ್ರಪಿಂಡದ ಕಸಿ ಮಾಡಿಸಿಕೊಂಡಿದ್ದ ರಜನಿಕಾಂತ್ ಹೈದರಾಬಾದ್‍ನ ಆಸ್ಪತ್ರೆಯಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಮೂರು ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ಚೆನ್ನೈಗೆ ಮರಳಿದ್ದ ನಟ, ತಮ್ಮ ಆರೋಗ್ಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಕೆಲ ದಿನಗಳ ಹಿಂದೆ ತೀರ್ಮಾನಿಸಿದ್ದ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಅಭಿಮಾನಿಗಳಿಗೆ ತಿಳಿದಿದ್ದಾರೆ.
— Rajinikanth (@rajinikanth) December 29, 2020