ಬೆಂಗಳೂರು: ರಾಜಕೀಯ ನಾಯಕರು, ಸಿನಿಮಾ ನಟರೇ ಕೊರೊನಾ ಮಾರ್ಗಸೂಚಿ, ನಿಯಮ ಉಲ್ಲಂಘಿಸುತ್ತಿದ್ದಾರೆ. ಆದರೂ ಯಾಕೆ ಕ್ರಮ ಕೈಗೊಂಡಿಲ್ಲ ಅಂತ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.
ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ಪ್ರವೇಶ ನಿರಾಕರಿಸಿದ್ದು, ಸಂಸದೆ ಶೋಭಾ ಕರಂದ್ಲಾಜೆ, ನಟ ದರ್ಶನ್‍ಗೆ ಯಾಕೆ ಅವಕಾಶ ಕೊಟ್ರಿ. ಸೆಲೆಬ್ರಿಟಿಗಳು, ರಾಜಕಾರಣಿಗಳಿಗೆ ಪ್ರತ್ಯೇಕ ಕಾನೂನು ಇದೆಯಾ ಎಂದು ಮುಜರಾಯಿ ಇಲಾಖೆಗೆ ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಚಾಮುಂಡಿ ತಾಯಿಯ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್
Advertisement
Advertisement
ಕೆಂಪೇಗೌಡ ಪುತ್ಥಳಿ ಶಿಲಾನ್ಯಾಸ ಕಾರ್ಯಕ್ರಮ, ಡಿಕೆಶಿ ಪುತ್ರಿ ವಿವಾಹ ನಿಶ್ಚಿತಾರ್ಥ ವೇಳೆಯೂ ರೂಲ್ಸ್ ಬ್ರೇಕ್ ಆಗಿದೆ. ಈ ಬಗ್ಗೆಯೂ ಆಗಸ್ಟ್ 21ರ ಒಳಗೆ ವಿಚಾರಣಾ ವರದಿ ನೀಡಿ ಎಂದು ಸೂಚಿಸಿದೆ. ಇದರ ಮಧ್ಯೆ ಕಾಂಗ್ರೆಸ್ ನಾಯಕರ ಇಂದಿನ ಪ್ರತಿಭಟನೆಯಲ್ಲೂ ಸಾಮಾಜಿಕ ಅಂತರ ಕಾಣಲಿಲ್ಲ. ಬಿಜೆಪಿ ಮುಖಂಡ ರುದ್ರೇಶ್ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆಯಾಗಿದೆ. ಇದನ್ನೂ ಓದಿ: ಸಾರ್ವಜನಿಕ ಪ್ರವೇಶ ನಿಷೇಧ- ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತಿದ ಶೋಭಾ ಕರಂದ್ಲಾಜೆ
Advertisement
ಕೆಪಿಸಿಸಿ ಅಧ್ಯಕ್ಷ @DKShivakumar ಹಾಗೂ ಪ್ರತಿಪಕ್ಷ ನಾಯಕ @siddaramaiah ಅವರ ನೇತೃತ್ವದಲ್ಲಿ ರಾಜಸ್ತಾನ ಸೇರಿದಂತೆ ನಾನಾ ರಾಜ್ಯಗಳಲ್ಲಿ ಬಿಜೆಪಿಯೇತರ ಸರಕಾರಗಳನ್ನು ಕೆಡವುವ ಮೂಲಕ ಬಿಜೆಪಿ ಪ್ರಜಾತಂತ್ರ ಹಾಗೂ ಸಂವಿಧಾನದ ಕಗ್ಗೊಲೆ ನಡೆಸುತ್ತಿರುವುದನ್ನು ಪ್ರತಿಭಟಿಸಿ ರಾಜಭವನ ಚಲೋ ‘ಪ್ರಜಾಪ್ರಭುತ್ವ ರಕ್ಷಿಸಿ-ಸಂವಿಧಾನ ರಕ್ಷಿಸಿ’ ಚಳುವಳಿ. pic.twitter.com/m1oGmd0fw8
— Karnataka Congress (@INCKarnataka) July 27, 2020