ಉಡುಪಿ: ಅಯೋಧ್ಯೆ ರಾಮ ಮಂದಿರ ವಿವಾದಿತ ಕ್ಷೇತ್ರ ಎಂದಿರುವ ಮಾಜಿ ಸಿಎಂ ಸಿದ್ಧರಾಮಯ್ಯಗೆ ಉಡುಪಿಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ತಿರುಗೇಟು ನೀಡಿದ್ದಾರೆ. ರಾಜಕೀಯ ನಾಯಕರಿಗಿಂತ ಚಂಬಲ್ ಡಕಾಯಿತರು ವಾಸಿ ಎಂದು ಹೇಳಿದ್ದಾರೆ.
ಶ್ರೀರಾಮಜನ್ಮಭೂಮಿ ಉತ್ಖನನ ಮಾಡಿ ಸುಪ್ರೀಂ ಕೋರ್ಟ್‌ಗೆ ವರದಿ ನೀಡಿದ ಕೆ.ಕೆ ಡಾ. ಮೊಹಮ್ಮದ್ ಅವರಿಗೆ ಡಾ. ಪಾದೂರು ಗುರುರಾಜ್ ಭಟ್ ನೆನಪಿನ ಪ್ರಶಸ್ತಿ ನೀಡಿ ಸನ್ಮಾನ ಮಾಡಿ ಅವರು ಮಾತನಾಡಿದರು.
Advertisement
Advertisement
ನ್ಯಾಯಾಲಯದ ಆದೇಶವನ್ನು ಒಪ್ಪುತ್ತಿಲ್ಲ ಎಂದರೆ ನಾಚಿಕೆಗೇಡು. ರಾಮಮಂದಿರಕ್ಕೆ ಬೇಕಾದ ಎಲ್ಲಾ ಸಾಕ್ಷಿಗಳನ್ನು ಭೂಗರ್ಭದಿಂದ ಪಡೆಯಲಾಗಿದೆ. ಕೆ ಕೆ ಮಹಮ್ಮದ್ ಅವರ ನೇತೃತ್ವದಲ್ಲಿ ಉತ್ಖನನ ನಡೆದು ಸಾಕ್ಷಿಗಳು ಕಣ್ಣ ಮುಂದಿವೆ. ಕೆಲ ಜನನಾಯಕರು ಮಂದಿರಕ್ಕೆ ಹತ್ತು ರೂಪಾಯಿ ಕೊಡಬೇಕಿದ್ದರೆ, ಭೂಮಿ ವಿವಾದಗ್ರಸ್ತ ಎನ್ನುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement
ರಾಮಮಂದಿರ ಇದ್ದ ಬಗ್ಗೆ ಎಲ್ಲಾ ಪುರಾವೆಗಳನ್ನು ನ್ಯಾಯಾಲಯಕ್ಕೆ ನೀಡಲಾಗಿದೆ. ಐವರು ನ್ಯಾಯಾಧೀಶರು ಸೇರಿ ತೀರ್ಪು ನೀಡಿದ್ದಾರೆ. ಅದರಲ್ಲೂ ಓರ್ವ ಮುಸ್ಲಿಂ ಸಮಾಜದ ನ್ಯಾಯಾಧೀಶರೇ ಇದ್ದರು. ಆದರೂ ಓರ್ವ ವಕೀಲರಾಗಿರುವ ಜನನಾಯಕ ಈ ತೀರ್ಪನ್ನು ಒಪ್ಪುತ್ತಿಲ್ಲ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಚಂಬಲ್ ಕಣಿವೆಯ ಡಕಾಯತರಿಗಿಂತಲೂ ಇಂತಹಾ ಜನನಾಯಕರು ಅಪಾಯಕಾರಿ ಎಂದಿದ್ದಾರೆ.