ರಾಜಕೀಯ ಗುರುಗಳ ಸಾವಿನಿಂದ ತುಂಬಾ ನೋವಾಗಿದೆ: ಬೆಳ್ಳಿಪ್ರಕಾಶ್

Public TV
1 Min Read
BELLIPRAKASH

ಚಿಕ್ಕಮಗಳೂರು: ನನ್ನ ರಾಜಕೀಯ ಗುರುಗಳ ಸಾವಿನಿಂದ ನನಗೆ ತುಂಬಾ ನೋವಾಗಿದೆ ಎಂದು ಕಡೂರು ಶಾಸಕ ಬೆಳ್ಳಿಪ್ರಕಾಶ್ ಬೇಸರ ವ್ಯಕ್ತಪಡಿಸಿದ್ದಾರೆ.

ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮೇಗೌಡರು ನನ್ನ ರಾಜಕೀಯ ಗುರುಗಳು. ಅವರ ಸಾವಿನಿಂದ ನನಗೆ ತುಂಬಾ ನೋವಾಗಿದೆ. 13 ವರ್ಷಗಳಿಂದ ಅವರ ಜೊತೆ ಒಡನಾಟವಿತ್ತು ಎಂದು ತಿಳಿಸಿದರು.

CKM 1 1

ರಾಜಕೀಯ ವಿಚಾರವಾಗಿ ಬೆಂಬಲಿಸುತ್ತಿದ್ದರು. ನನ್ನ ರಾಜಕೀಯಕ್ಕೆ ತರಲು ಪ್ರಯತ್ನ ಮಾಡಿದ್ರು. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ. ಇವರ ಸಾವಿನಿಂದ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಉಪಸಭಾಪತಿ ಎಸ್. ಎಲ್ ಧರ್ಮೇಗೌಡರ ರಾಜಕೀಯ ಪಯಣ ಹೀಗಿತ್ತು

ಧರ್ಮೇಗೌಡರು ಮಧ್ಯರಾತ್ರಿ 12 ಗಂಟೆಯ ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯಿಂದ ಧರ್ಮೇಗೌಡರ ದೇಹ ಛಿದ್ರಛಿದ್ರವಾಗಿದ್ದು, 100 ಮೀಟರ್ ದೂರದಲ್ಲಿ ಕೈ ಪತ್ತೆಯಾಗಿದೆ. ಪರಿಷತ್ ನಲ್ಲಿ ನಡೆದ ಗಲಾಟೆಯಿಂದ ನೊಂದಿದ್ದಾರೆ ಎಂದು ಹೇಳಲಾಗಿದೆ. ಮನೆಯ ಆಸ್ತಿ, ಹಣಕಾಸು ವಿಚಾರವಾಗಿ ಡೆತ್ ನೋಟಿನಲ್ಲಿ ಬರೆದಿರುವ ಧರ್ಮೇಗೌಡರು ಪತ್ನಿ, ಮಗ ಹಾಗೂ ಮಗಳಲ್ಲಿ ಕ್ಷಮೆ ಕೇಳಿದ್ದಾರೆ. ಅಲ್ಲದೆ ಅರ್ಧಕ್ಕೆ ನಿಲ್ಲಿಸಿದ್ದ ಮನೆಯನ್ನು ಪೂರ್ಣಗೊಳಿಸುವಂತೆ ಡೆತ್‍ನೋಟ್ ನಲ್ಲಿ ಸೂಚಿಸಿದ್ದಾರೆ. ಇದನ್ನೂ ಓದಿ: ರೈಲ್ವೇ ಟ್ರ್ಯಾಕ್ ಬಳಿ ಕಾರು ನಿಲ್ಲಿಸಲು ಹೇಳಿ ಡ್ರೈವರ್ ವಾಪಸ್ ಕಳಿಸಿದ್ರು ಧರ್ಮೇಗೌಡ!

BELLIPRAKASH 1

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಸ್ವಗ್ರಾಮ ಸರ್ಪನಹಳ್ಳಿಯಲ್ಲಿ ತಂದೆಯ ಸಮಾಧಿ ಪಕ್ಕದಲ್ಲೇ ಸಂಜೆ ಉಪಸಭಾಪತಿಗಳ ಅಂತ್ಯಕ್ರಿಯೆ ನಡೆಯಲಿದೆ. ಸದ್ಯ ತೋಟದ ಮನೆ ಆವರಣದಲ್ಲಿ ಅಂತಿಮದರ್ಶನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಕುಟುಂಬದ ಸದಸ್ಯರು ತೋಟದ ಮನೆ ಆವರಣದಲ್ಲಿ ಎರಡು ಜೆಸಿಬಿಗಳಿಂದ ಸ್ಥಳ ಸಿದ್ಧತೆ ಮಾಡುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಮೃತದೇಹ ಸರಪನಹಳ್ಳಿಗೆ ಬರೋ ನಿರೀಕ್ಷೆ ಇದ್ದು, ಆ ಹಿನ್ನೆಲೆಯಲ್ಲಿ ಅಂತಿಮ ದರ್ಶನಕ್ಕೆ ರೆಡಿ ಮಾಡಲಾಗುತ್ತಿದೆ.

https://www.youtube.com/watch?v=jETdpSkvaGM&ab_channel=PublicTV%7C%E0%B2%AA%E0%B2%AC%E0%B3%8D%E0%B2%B2%E0%B2%BF%E0%B2%95%E0%B3%8D%E0%B2%9F%E0%B2%BF%E0%B2%B5%E0%B2%BF

Share This Article
Leave a Comment

Leave a Reply

Your email address will not be published. Required fields are marked *