– ಪಕ್ಷದಲ್ಲಿ ಅಸಮಾಧಾನ ಅನ್ನೋದು ಇಲ್ಲ
ಚಿತ್ರದುರ್ಗ: ರಾಜಕೀಯ ಎಂದ ಮೇಲೆ ಸಮಾಧಾನ ಮತ್ತು ಅಸಮಾಧಾನ ಕಾಮನ್ ಆಗಿದೆ. ಅದಕ್ಕೆಲ್ಲ ಏನೂ ಮಾಡಲು ಸಾಧ್ಯವಿಲ್ಲ, ಸಮಾಧಾನ ಮಾಡಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಸಚಿವ ಶ್ರೀ ರಾಮುಲು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಸಹಜವಾಗಿದೆ. ರಾಜಕೀಯದಲ್ಲಿ ಸಮಾಧಾನ ಅಸಮಾಧಾನ ಕಾಮನ್ ಆಗಿದೆ. ಅದಕ್ಕೆ ಏನೂ ಮಾಡೋಕಾಗಲ್ಲ, ಎಲ್ಲರೂ ಸಮಾಧಾನ ಮಾಡ್ಕೋಬೇಕು. ಸಚಿವ ಸ್ಥಾನ ನೀಡೋದು, ಬದಲಿಸೋದು ಸಿಎಂಗೆ ಬಿಟ್ಟ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಸಮರ್ಥ ಮಂತ್ರಿಮಂಡಲ ಮಾಡುವ ಉದ್ದೇಶದಿಂದ ಸಚಿವರ ಖಾತೆ ಬದಲಾವಣೆ ಮಾಡುತ್ತಿದ್ದಾರೆ. ಸಮರ್ಥರಿಗೆ ಅವಕಾಶ ಮಾಡಿಕೊಡೋದು ದೇಶದ ಬದಲಾವಣೆಗಾಗಿ ಆಗಿದೆ. ಭಾರತೀಯ ಜನತಾ ಪಾರ್ಟಿಯಲ್ಲಿ ಸಮರ್ಥ ಮಂತ್ರಿಮಂಡಲ ಇದೆ. ಸಚಿವರಾದ ಆನಂದ್ ಸಿಂಗ್ ಹಾಗೂ ಮಾಧುಸ್ವಾಮಿ ಕರೆಸಿ ಇಂದು ಸಿಎಂ ಮಾತನಾಡುತ್ತಾರೆ. ಅವರವರ ಜಿಲ್ಲೆಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ. ಖಾತೆ ಹಂಚಿಕೆ ವಿಚಾರವಾಗಿ ಯಾರಿಗೂ ಅಸಮಾಧಾನ ಅನ್ನೋದು ಇಲ್ಲ ಎಂದು ಹೇಳಿದ್ದಾರೆ.