ಬೆಂಗಳೂರು: ಸಿನಿಮಾ ರಂಗದಲ್ಲಿ ಇರುವವರು ರಾಜಕೀಯಕ್ಕೆ ಬರುವುದು ಸಾಮಾನ್ಯ. ಅದೇ ರೀತಿಯಾಗಿ ನಟಿ ರಾಧಿಕಾ ಕುಮಾರಸ್ವಾಮಿ ಸಹ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಗೆ ರಾಧಿಕಾ ಅವರು ಇಂದಿನ ಸುದ್ದಿಗೋಷ್ಠಿಯಲ್ಲಿ ಉತ್ತರ ನೀಡಿದ್ದಾರೆ.
ಸಿನಿಮಾದವರು ಮತ್ತು ನನ್ನ ಕುಟುಂಬದವರು ರಾಜಕೀಯಕ್ಕೆ ಬನ್ನಿ ಎಂದು ನನಗೆ ಹೇಳುತ್ತಿದ್ದಾರೆ. ಆದರೆ ನನಗೆ ರಾಜಕೀಯ ಕುರಿತಾಗಿ ಹೆಚ್ಚಿನ ಆಸಕ್ತಿ ಇಲ್ಲ ಎಂದು ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
Advertisement
Advertisement
ಸಿನಿಮಾದವರು ಮತ್ತು ನನ್ನ ಕುಟುಂಬದವರು ಪ್ರತಿಯೊಬ್ಬರು ರಾಜಕಿಯಕ್ಕೆ ಬನ್ನಿ ಎಂದು ನನ್ನನ್ನು ಕರೆಯುತ್ತಿದ್ದರು. ಆದರೆ ನನಗೆ ರಾಜಕೀಯ ಕುರಿತಾಗಿ ಆಸಕ್ತಿ ಇರಲಿಲ್ಲ. ರಾಜಕಾರಣಿಗಳನ್ನು ನಾನು ಭೇಟಿಯಾಗಿಲ್ಲ ಎಂದು ಹೇಳುವುದಿಲ್ಲ. ತುಂಬಾ ಜನ ರಾಜಕಾರಣಿಗಳನ್ನು ನಾನು ಭೇಟಿಯಾಗಿದ್ದೇನೆ ಎಂದು ಹೇಳಿದರು. ಇದನ್ನು ಓದಿ : 1.5 ಕೋಟಿ ಬಂದಿಲ್ಲ, ಸ್ವಾಮಿ ಖಾತೆಯಿಂದ ಬಂದಿರೋದು 15 ಲಕ್ಷ – ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ
Advertisement
Advertisement
ಸಿನಿಮಾವೇ ನನ್ನ ಕನಸಾಗಿತ್ತು. ಸಿನಿಮಾ ಮಾಡುವವರೆಗೂ ಸಿನಿಮಾದಲ್ಲಿ ತೊಡಗಿಕೊಳ್ಳೊಣ. ಮುಂದೆ ಯಾವ ರೀತಿಯಾಗಿ ಸಂದರ್ಭ ಬರುತ್ತೆ ಎನ್ನುವುದನ್ನು ನೋಡಿ ನಿರ್ಧರಿಸಬೇಕು ಎಂದಿದ್ದೇನೆ. ಸಿನಿಮಾ ಕಾರ್ಯಕ್ರಮಲ್ಲೆ ರಾಜಕೀಯ ವ್ಯಕ್ತಿಗಳನ್ನು ಕರೆಸುವ ಉದ್ದೇಶದಿಂದ ಅವರ ಜೊತೆ ಮಾತನಾಡಿರಬಹುದು ಹೊರತು ಬೇರೆ ಯಾವ ಉದ್ದೇಶವಿಲ್ಲ ಎಂದಿದ್ದಾರೆ.
ಆರ್‍ಎಸ್‍ಎಸ್ ಮತ್ತು ಬಿಜೆಪಿ ನಾಯಕರ ಹೆಸರಲ್ಲಿ ವಂಚನೆ ಮಾಡಿ ಸದ್ಯ ಸಿಸಿಬಿಯಿಂದ ಬಂಧನಕ್ಕೆ ಒಳಗಾದ ಯುವರಾಜ್ ಅಲಿಯಾಸ್ ಸ್ವಾಮಿಯಿಂದ 1.5 ಕೋಟಿ ರೂ. ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದ್ದಾರೆ. ನನಗೆ ಯುವರಾಜ್ ಅವರ ಖಾತೆಯಿಂದ 15 ಲಕ್ಷ ರೂ.ಹಣ ಬಂದಿದೆ ಹೊರತು 1.5 ಕೋಟಿ ರೂ. ಹಣ ಬಂದಿಲ್ಲ ಎಂದು ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.