ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಭೀತಿಯ ನಡುವೆಯೂ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, 6 ವರ್ಷದ ಹೆಣ್ಣು ಮಗು ರಾಜಕಾಲುವೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಘಟನೆ ಬೆಳ್ಳಂದೂರಿನ ಕರಿಯಮ್ಮನಗರದಲ್ಲಿ ನಡೆದಿದೆ.
ಕೊಚ್ಚಿಹೋದ ಮಗುವನ್ನು 6 ವರ್ಷದ ಭೂಮಿಕ ಎಂದು ಗುರುತಿಸಲಾಗಿದೆ. ಅಸ್ಸಾನಿಂದ ಕೂಲಿ ಕೆಲಸಕ್ಕೆ ಬಂದಿದ್ದ ದಂಪತಿ ಪುತ್ರಿಯಾದ ಭೂಮಿಕಾ, ಮಧ್ಯಾಹ್ನ ಸುಮಾರು 2 ಗಂಟೆಯಲ್ಲಿ ಆಟವಾಡುತ್ತಿರುವಾಗ ಮಾರತಹಳ್ಳಿಯ ರಾಜಕಾಲುವೆಗೆ ಬಿದ್ದಿದ್ದಾಳೆ. ಸ್ವಲ್ಪ ದೂರದವರೆಗೂ ತೇಲಿಹೋದ ಮಗು ಬಳಿಕ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದೆ.
Advertisement
Advertisement
ಅಸ್ಸಾಂ ಮೂಲದಿಂದ ಬದುಕನ್ನು ಕಟ್ಟಿಕೊಳ್ಳು ಮಗುವಿನ ಜೊತೆ ಬೆಂಗಳೂರಿಗೆ ಬಂದಿದ್ದ ದಂಪತಿ, ಬಾಂಗ್ಲಾ ವಲಸಿಗರ ಕ್ಯಾಂಪ್‍ಗಳಲ್ಲಿ ವಾಸವಿದ್ದರು. ಇಬ್ಬರು ಕೊಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಇಂದು ಆಟವಾಡುತ್ತಿದ್ದ ಮಗಳು ಭೂಮಿಕಾ ಆಯಾ ತಪ್ಪಿ ರಾಜಕಾಲುವೆಗೆ ಬಿದ್ದಿದ್ದಾಳೆ. ಪರಿಣಾಮ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಕ್ಯಾಂಪ್‍ಗಳ ಬಳಿ ರಾಜಕಾಲುವೆಗೆ ಯಾವುದೇ ತಡೆಗೋಡೆ ಇಲ್ಲದೇ ಇರುವುದು ಇದಕ್ಕೆ ಕಾರಣ ಎಂದು ಹೇಳಾಗಿದೆ.
Advertisement
Advertisement
ಈಗಾಗಲೇ ಸ್ಥಳಕ್ಕೆ ಸರ್ಜಾಪುರ ಮತ್ತು ಮಹದೇವಪುರ ಅಗ್ನಿಶಾಮಕ ದಳದವರು ಬಂದಿದ್ದು, 25 ಜನರ ಅಗ್ನಿಶಾಮಕ ದಳ ತಂಡದವರಿಂದ ಕಾರ್ಯಾಚರಣೆ ನಡೆಯುತ್ತಿದೆ. ಬೋಟ್ ಮೂಲಕ ಮಗುವಿನ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ಮಾರತಹಳ್ಳಿ ಪೊಲೀಸರು ಆಗಮಿಸಿದ್ದು, ಅಗ್ನಿಶಾಮಕ ದಳಕ್ಕೆ ಸೂಕ್ತ ನೆರವು ನೀಡುವ ಕೆಲಸ ಮಾಡುತ್ತಿದ್ದಾರೆ.