ಬೆಂಗಳೂರು: ಕಾಂಗ್ರೆಸ್ಸಿನಿಂದ ಅಲ್ಪಸಂಖ್ಯಾತರನ್ನ ಮುಖ್ಯಮಂತ್ರಿ ಮಾಡಬೇಕು ವಿಚಾರ ನಾವು ತೀರ್ಮಾನ ಮಾಡೋಕೆ ಆಗಲ್ಲ. ಅದನ್ನ ಹೈ ಕಮಾಂಡ್ ಮಾಡಬೇಕು ಎಂದು ಶಾಸಕ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ನಾನಿನ್ನು ಎಲ್‍ಕೆಜಿ ವಿದ್ಯಾರ್ಥಿ. ಹಾಗಾಗಿ ನಾನೂ ಆ ಸ್ಥಾನಕ್ಕೆ ಹೋಗೋಕೆ ಸಾಧ್ಯವಿಲ್ಲ. ಅದನ್ನೆಲ್ಲ ಜನ, ನಮ್ಮ ಹೈಕಮಾಂಡ್ ತೀರ್ಮಾನಿಸಬೇಕು. ನಾನು ಹೇಳೋಕೆ ಆಗಲ್ಲ. ನಾನು ಸಿಎಂ ಅಭ್ಯರ್ಥಿ ಅಲ್ಲ. ಆ ಮಟ್ಟಕ್ಕೆ ನಾನಿನ್ನೂ ಹೋಗಿಲ್ಲ ಎಂದರು.
Advertisement
Advertisement
ಸಿಎಂ ಇಬ್ರಾಹಿಂ ಅವರು ನನ್ನನ್ನ ಸೆಕೆಂಡ್ ಸ್ಟಾಂಡರ್ಡ್ ರಾಜಕಾರಣಿ ಅಂದಿದ್ದಾರೆ. ಅವರು ರಾಜಕಾರಣದಲ್ಲಿ ಪಿಹೆಚ್ ಡಿ ಮಾಡಿದ್ದಾರಂತೆ. ಅದನ್ನ ಅವರೇ ಹೇಳಿದ್ದಾರೆ. ನಾನು ಸೆಕೆಂಡ್ ಸ್ಟಾಂಡರ್ಡ್ ಅಲ್ಲಾ ನಾನಿನ್ನು ಎಲ್‍ಕೆಜಿ ಅಷ್ಟೆ. ಎಲ್‍ಕೆಜಿಯಾಗಿರುವವನಿಗೆ ಆ ಸ್ಥಾನ ಸಿಗುತ್ತಾ…? ಈಗ ತನ್ವೀರ್ ಸೇಠ್, ನಾನು ಸಿಎಂ ಆಕಾಂಕ್ಷಿ ಅಂತಿದ್ದಾರೆ. ಸಿ.ಎಂ.ಇಬ್ರಾಹಿಂ ನಾನು ಸಿಎಂ ಆಕಾಂಕ್ಷಿ ಅಂತಿದ್ದಾರೆ ಎಂದು ಹೇಳಿದರು.
Advertisement
ನನ್ನನ್ನ ಸೆಕೆಂಡರಿ ಸ್ಕೂಲ್ ಗೆ ಹೋಲಿಸಿದ್ದಾರೆ. ರಾಜಕಾರಣದಲ್ಲಿ ಇನ್ನೂ ಎಲ್ ಕೆಜಿ ನಾನು ಹಾಗಾಗಿ ನಾನೆಲ್ಲಿ ಆ ಸ್ಥಾನಕ್ಕೆ ಹೋಗೋಕೆ ಸಾಧ್ಯ ಎಂದಿದ್ದಾರೆ. ಇದನ್ನೂ ಓದಿ: ನಾನು ಓಪನ್ ಹಾರ್ಟೆಡ್, ಸಿದ್ದರಾಮಯ್ಯ ಮಾತನಾಡಬೇಡ ಎಂದಿದ್ದಾರೆ: ಜಮೀರ್