ಬೆಂಗಳೂರು: ರಾಗಿಣಿ ಮತ್ತು ಸಂಜನಾಗೆ ಬೇಲ್ ಕೊಡದಿದ್ದರೆ, ಬಾಂಬ್ ಹಾಕುತ್ತೇವೆ ಎಂದು ಪತ್ರ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಡ್ರಗ್ಸ್ ಕೇಸಿನಲ್ಲಿ ಅರೆಸ್ಟ್ ಆಗಿರುವ ನಟಿಯಾರ ರಾಗಿಣಿ ಮತ್ತು ಸಂಜಾನ ಅವರಿಗೆ ಜಾಮೀನು ನೀಡದೆ ಇದ್ದರೆ, ಸಿಟಿ ಸಿವಿಲ್ ಕೋರ್ಟ್ ಮತ್ತು ಕಮೀಷನರ್ ಆಫೀಸಿಗೆ ಬಾಂಬ್ ಹಾಕುತ್ತೇವೆ ಎಂದು ನಿನ್ನೆ ಬೆದರಿಕೆ ಪತ್ರವನ್ನು ಬರೆಯಲಾಗಿತ್ತು. ಜೊತೆಗೆ ಸಿಟಿ ಸಿವಿಲ್ ಕೋರ್ಟ್ ಜಡ್ಜ್, ಕಮೀಷನರ್ ಕಮಲ್ ಪಂಥ್, ಜಂಟಿ ಪೊಲೀಸ್ ಆಯುಕ್ತ, ಸಂದೀಪ್ ಪಾಟೀಲ್ ಮತ್ತು ಡಿಸಿಪಿ ರವಿಕುಮಾರಿಗೆ ಪತ್ರ ಬರೆದಿದ್ದರು.
Advertisement
Advertisement
ಈ ಬೆದರಿಕೆ ಪತ್ರವನ್ನು ದ್ವೇಷದ ಹಿನ್ನೆಲೆಯಲ್ಲಿ ಬರೆಯಲಾಗಿದೆ ಎಂದು ಶಂಕಿಸಲಾಗಿದೆ. ಪತ್ರ ಕಳುಹಿಸಿರುವ ವ್ಯಕ್ತಿ ಪತ್ರದ ಜೊತೆಗೆ ವ್ಯಕ್ತಿಯೊಬ್ಬರ ವೋಟರ್ ಐಡಿ ಮತ್ತು ಎರಡು ಮೊಬೈಲ್ ನಂಬರ್ ಕಳುಹಿಸಿದ್ದ. ಪತ್ರದಲ್ಲಿರುವ ವೋಟರ್ ಐಡಿ ಕೊಡಿಯಳ್ಳಿ ಪಂಚಾಯತ್, ಹರಿವೇಸಂದ್ರ ಗ್ರಾಮ ಶಿವಪ್ರಕಾಶ್ ಎಂಬ ಹೆಸರಿನಲ್ಲಿದೆ. ಈ ಬೆದರಿಕೆ ಪತ್ರಗಳು ನಿನ್ನೆ ಸಂಜೆ ಐದು ಗಂಟೆ ವೇಳೆ ಬಂದಿದ್ದವು.
Advertisement
Advertisement
ಎನ್‍ಡಿಪಿಎಸ್ ಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬಂದಿದ್ದು, ನಟಿ ಸಂಜನಾ ಮತ್ತು ರಾಗಿಣಿಗೆ ಜಾಮೀನು ನೀಡಬೇಕು. ಇಲ್ಲವಾದಲ್ಲಿ ಕಾರು ಉಡಾಯಿಸೋದಾಗಿ ಹೇಳಲಾಗಿದೆ. ಇದಲ್ಲದೆ ಸಿಸಿಬಿ ಡಿಸಿಪಿ ರವಿಕುಮಾರ್ ಮತ್ತು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಗೆ ಸಹ ಬೆದರಿಕೆ ಪತ್ರ ಬಂದಿದೆ. ಡ್ರಗ್ ಕೇಸ್ ಹಾಗು ಡಿಜೆ ಹಳ್ಳಿ ಕೇಸ್ ತನಿಖೆ ನಿಲ್ಲಿಸದಿದ್ರೆ ಸರಿ ಇರೋದಿಲ್ಲ ಅಂತಾ ಕೂಡ ಎಚ್ಚರಿಸಲಾಗಿದೆ. ತುಮಕೂರಿನಿಂದ ಬಂದಿರುವ ಅನಾಮಧೇಯ ಪತ್ರದಲ್ಲಿ ಬಾಂಬ್ ಇದೆ ಅಂತಾ ಹೆದರಿಸಲಾಗಿತ್ತು. ಪತ್ರದ ಒಳಗೆ ಕೇಬಲ್ ವೈರ್ ಮತ್ತು ಬಂಡೆ ಕತ್ತರಿಸಲು ಬಳಸುವ ಡಿಟೋನೇಟರ್ ಇತ್ತು.