ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್‍ನಲ್ಲಿ ಅರೆಸ್ಟ್ ಆಗಿರುವ ನಟಿಯರಾದ ಸಂಜನಾ, ರಾಗಿಣಿ ಸೇಫ್ ಆಗುವ ರೀತಿಯ ಎಡವಟ್ಟೊಂದನ್ನು ಸಿಸಿಬಿ ಪೊಲೀಸರು ಮತ್ತು ವೈದ್ಯರು ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ.
ಈಗಾಗಲೇ ಜೈಲಿನಲ್ಲಿರುವ ರಾಗಿಣಿ, ಸಂಜನಾ ಡ್ರಗ್ಸ್ ವ್ಯಸನಿಗಳಾಗಿದ್ದರಾ ಎಂಬ ಅನುಮಾನದ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಸಂಗ್ರಹಿಸಲಾಗಿದ್ದ, ಕೂದಲು ಸ್ಯಾಂಪಲ್ ಅನ್ನು ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯ ವಾಪಸ್ ಕಳುಹಿಸಿದೆ.
Advertisement
Advertisement
ಕೂದಲ ಸ್ಯಾಂಪಲ್ ಅನ್ನು ನಿಯಮಾವಳಿ ಪ್ರಕಾರ ಪ್ಯಾಕಿಂಗ್ ಮಾಡದೇ, ಸಿಲ್ವರ್ ಕವರ್‌ನಲ್ಲಿ ಪ್ಯಾಕ್ ಮಾಡಿ ಟೆಸ್ಟ್‌ಗೆ ಕಳಿಸಲಾಗಿದೆ ಎಂದು ಹೇಳಿ ಕೆಸಿ ಜನರಲ್ ಆಸ್ಪತ್ರೆಗೆ ವಾಪಸ್ ಕಳುಹಿಸಿದ್ದಾರೆ. ಹೀಗಾಗಿ ನಟಿ ಸಂಜನಾ ಮತ್ತು ರಾಗಿಣಿ ಹೇರ್ ಟೆಸ್ಟ್ ಮತ್ತೆ ಡೋಪಿಂಗ್ ಟೆಸ್ಟ್ ರಿಸಲ್ಟ್ ಮತ್ತಷ್ಟು ತಡವಾಗಲಿದೆ. ಇದನ್ನೂ ಓದಿ: ಡ್ರಗ್ಸ್ ನಟಿಯರಿಗೆ ಹೇರ್ ಫೋಲಿಕಲ್ ಟೆಸ್ಟ್ – ಏನಿದು ಟೆಸ್ಟ್? ನಿಖರ ಹೇಗೆ?
Advertisement
ಈ ಬಗ್ಗೆ ಮಾತನಾಡಿದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಸ್ಯಾಂಪಲ್ ವಾಪಸ್ ಬಂದಿದೆ. ಅದನ್ನ ಸರಿಪಡಿಸಿ ಈಗ ಮತ್ತೆ ಕಳಿಸಲಾಗಿದೆ. ಇದೇ ಮೊದಲ ಬಾರಿಗೆ ಹೆಚ್ಚುವರಿ ಸಾಕ್ಷಿಗಾಗಿ ಕೂದಲಿನ ಪರೀಕ್ಷೆ ಮಾಡಿಸಲಾಗಿತ್ತು ಎಂದು ತಿಳಿಸಿದರು.
Advertisement
ಆರೋಪಿ ನಟಿಯರು ಮಾದಕ ವ್ಯಸನಿಗಳಾಗಿರುವ ಶಂಕೆಯನ್ನು ಸಿಸಿಬಿ ಪೊಲೀಸರು ವ್ಯಕ್ತಪಡಿಸಿದ್ದರು. ಇದನ್ನು ಖಚಿತಪಡಿಸಿಕೊಳ್ಳಲು ಕೋರ್ಟ್ ಅನುಮತಿ ಪಡೆದು ಮೂತ್ರ, ರಕ್ತ, ಕೂದಲ ಸ್ಯಾಂಪಲ್ ಸಂಗ್ರಹಿಸಲಾಗಿತ್ತು.