ಚಾಮರಾಜನಗರ: ನಟಿ ರಾಗಿಣಿ ದ್ವಿವೇದಿ ಅವರು ಈ ರೀತಿ ಅಂತ ನನಗೆ ಗೊತ್ತಿರಲಿಲ್ಲ ಎಂದು ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ನಾರಾಯಣ್ ಗೌಡ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರರಂಗಕ್ಕೂ ನನಗೂ ಟಚ್ ಕಡಿಮೆ ಇದೆ. ಚಿತ್ರ ನಟಿ ರಾಗಿಣಿಯನ್ನ ಪ್ರಚಾರಕ್ಕೆ ನಾವು ಕರೆಸಿರಲಿಲ್ಲ. ಚಿತ್ರರಂಗದಲ್ಲಿ ಕೆಲಸ ಮಾಡುವ ನನ್ನ ಕೆಲವು ಸ್ನೇಹಿತರು ಪ್ರಚಾರಕ್ಕೆ ಕರೆಸಿದ್ದರು. ಆದರೆ ರಾಗಿಣಿ ಈ ರೀತಿ ಎಂದು ಗೊತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಶಿವಪ್ರಕಾಶ್ ಅವರು ರಾಗಿಣಿ ಜೊತೆ ಮೂರು ವರ್ಷ ಕೆಲಸ ಮಾಡಿದ್ದಾರೆ. ಅವರ ಹೆಸರು ಸಹ ಕೇಳಿ ಬರುತ್ತಿದೆ. ಇದರ ಬಗ್ಗೆಯೂ ಸಹ ನನಗೆ ಗೊತ್ತಿಲ್ಲ. ನನ್ನ ಚುನಾವಣಾ ಪ್ರಚಾರಕ್ಕೆ ಅವರನ್ನ ಕರೆಸಿರಲಿಲ್ಲ. ಪ್ರಚಾರಕ್ಕೆ ಬಂದ್ರೆ ನಾವೇನು ಮಾಡೋಕೆ ಆಗುತ್ತೆ ಎಂದು ಪ್ರಶ್ನಿಸಿದರು. ಇದೇ ವೇಳೆ ರಾಗಿಣಿ ಪರವಾಗಿ ನಮ್ಮ ಪಕ್ಷದಲ್ಲಿ ಯಾರೂ ಇಲ್ಲ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಹಳ್ಳಿ ಹಳ್ಳಿಗಳಲ್ಲೂ ಗಾಂಜಾ ಮಾರಾಟ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ನಾಗಮಂಗಲದಲ್ಲಿ ಗಾಂಜಾ ಮಾರಾಟ ಇದ್ದರೆ ಹಿಡಿದುಕೊಡಲಿ. ಇಲ್ಲವಾದ್ರೆ ನಮಗೆ ಟಿಪ್ಸ್ ಕೊಡಲಿ. ಎಂದು ಸಚಿವರು ಗರಂ ಆದರು.