ರಾಕಿಂಗ್ ದಂಪತಿ ನಿಶ್ಚಿತಾರ್ಥಕ್ಕೆ 5 ವರ್ಷ- ವಿಶೇಷ ವೀಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್

Public TV
1 Min Read
yash radhika pandit engagement

ಬೆಂಗಳೂರು: ಸ್ಯಾಂಡಲ್‍ವುಡ್‍ನ ರಾಕಿಂಗ್ ಜೋಡಿ ಎಂದೇ ಪ್ರಸಿದ್ಧರಾಗಿರುವ ಕ್ಯೂಟ್ ಕಪಲ್ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ನಿಶ್ಚಿರ್ಥವಾಗಿ 5 ವರ್ಷಗಳು ಕಳೆದಿದ್ದು, ಈ ಬಗ್ಗೆ ಅದ್ಭುತ ವೀಡಿಯೋ ಹಂಚಿಕೊಂಡು, ನಿನ್ನೆಯಷ್ಟೇ ನಿಶ್ಚಿತಾರ್ಥವಾದಂತಿದೆ ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.

yash radhika pandit engagement 2

ಈ ಕುರಿತು ಇನ್‍ಸ್ಟಾಗ್ರಾಂನಲ್ಲಿ ವೀಡಿಯೋ ಹಂಚಿಕೊಂಡಿರುವ ಅವರು, ನನ್ನ ನೆಚ್ಚಿನ ಸ್ಥಳದಲ್ಲಿ ನೆಚ್ಚಿನ ಜನರ ಸುತ್ತ ಈ ಇಂಕ್ರಿಡಿಬಲ್ ವ್ಯಕ್ತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಇಂದಿಗೆ 5 ವರ್ಷಗಳಾಯಿತು. ಈಗಲೂ ಆ ದಿನ ನನಗೆ ನೆನಪಿದೆ. ನಿನ್ನೆಯಂತೆ ಭಾಸವಾಗುತ್ತಿದೆ. ಆ ಅತ್ಯದ್ಭುತ ದಿನವನ್ನು ಮರುಜೀವಿಸಲು ಈ ವೀಡಿಯೋವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ತಮ್ಮ ಸ್ನೇಹಿತರು ಹಾಗೂ ಆತ್ಮೀಯರಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದು, ಆ ವಿಶೇಷ ದಿನದ ಭಾಗವಾಗಿದ್ದ ಆತ್ಮೀಯ ಸ್ನೇಹಿತರು ಯಾವುದಾದರೊಂದು ಫೋಟೋ ಹಂಚಿಕೊಳ್ಳಿ, ಅಲಂಕಾರದ ಚಿತ್ರಗಳು, ಇನ್ವಿಟೇಶನ್ ಇಲ್ಲವೇ ಯಾವುದಾದರೊಂದು ನೆನಪನ್ನು ಹಂಚಿಕೊಳ್ಳಿ. ಪೋಸ್ಟ್ ಮಾಡುವಾಗ ನನ್ನನ್ನು ಟ್ಯಾಗ್ ಮಾಡಿ ಎಂದು ಕೇಳಿಕೊಂಡಿದ್ದಾರೆ.

radhika yash ayra

ರಾಕಿಂಗ್ ಸ್ಟಾರ್ ದಂಪತಿಯ ನಿಶ್ಚಿತಾರ್ಥ ಆಗಸ್ಟ್ 12, 2016ರಂದು ಗೋವಾದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆದಿತ್ತು. ಕೇವಲ ಆತ್ಮೀಯರು, ಕುಟುಂಬಸ್ಥರಿಗಷ್ಟೇ ಅವಕಾಶ ನೀಡಲಾಗಿತ್ತು. ಅದರಲ್ಲೂ ರಾಧಿಕಾ ಪಂಡಿತ್ ಅವರ ಫೇವರಿಟ್ ಪ್ಲೇಸ್ ಗೋವಾದಲ್ಲೇ ಎಂಗೇಜ್‍ಮೆಂಟ್ ನಡೆದಿತ್ತು. ಈ ಅದ್ಭುತ ಘಳಿಗೆಯನ್ನು ಇದೀಗ ರಾಧಿಕಾ ಪಂಡಿತ್ ಮೆಲುಕು ಹಾಕಿದ್ದಾರೆ.

yash radhika 6

ನಿಶ್ಚಿತಾರ್ಥದ ಬಳಿಕ ಯಶ್ ರಾಧಿಕಾ ದಂಪತಿ ಡಿಸೆಂಬರ್ 9, 2016ರಲ್ಲಿ ವಿವಾಹವಾದರು. ಇದೀಗ ದಂಪತಿಗೆ ಐರಾ ಹಾಗೂ ಯಥರ್ವ್ ಇಬ್ಬರು ಮಕ್ಕಳಿದ್ದಾರೆ. ರಾಧಿಕಾ ಪಂಡಿತ್ ಮಕ್ಕಳಿಗೆ ಹಾಗೂ ಕುಟುಂಬಕ್ಕೆ ಹೆಚ್ಚು ಸಮಯ ನೀಡುವ ಉದ್ದೇಶದಿಂದ ಯಾವುದೇ ಚಿತ್ರಗಳಿಗೆ ಸಹಿ ಹಾಕಿಲ್ಲ. ಯಶ್ ಸಹ ಕುಟುಂಬಕ್ಕೆ ಹೆಚ್ಚು ಒತ್ತು ನೀಡಿ, ಸಮಯ ಮೀಸಲಿಡುತ್ತಾರೆ. ಒಟ್ನಲ್ಲಿ ರಾಕಿಂಗ್ ದಂಪತಿ ಕೌಟುಂಬಿಕ ಜೀವನವನ್ನು ಫುಲ್ ಎಂಜಾಯ್ ಮಾಡುತ್ತಿದೆ.

yash radhika 10

Share This Article
Leave a Comment

Leave a Reply

Your email address will not be published. Required fields are marked *