ರಾಕಿಂಗ್ ದಂಪತಿಯ ಮುದ್ದು ಮಗಳಿಗೆ 2ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

Public TV
2 Min Read
AYRA

– ಬೇಗ ಬೆಳೆಯಬೇಡ ಅಂದ್ರು ರಾಧಿಕಾ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ಅವರು ಮುದ್ದಿನ ಮಗಳು ಐರಾಳಿಗೆ ಇಂದು ಎರಡನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಟ ಹಾಗೂ ನಟಿಯ ಅಭಿಮಾನಿಗಳು ಐರಾಳಿಗೆ ಹುಟ್ಟುಹಬ್ಬದ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

ayra 2

ಹೌದು. ಕಳೆದ ಕೆಲ ದಿನಗಳಿಂದ ಯಶ್ ಹಾಗೂ ರಾಧಿಕಾ ಅಭಿಮಾನಿಗಳು ಐರಾ ಹುಟ್ಟುಹಬ್ಬದ ದಿನವನ್ನು ಲೆಕ್ಕ ಹಾಕುತ್ತಾನೆ ಬರುತ್ತಿದ್ದರು. ಇದೀಗ ಇಂದು ಐರಾ ಎರಡನೇ ವರ್ಷಕ್ಕೆ ಕಾಲಿಡುತ್ತಿದ್ದು, ಅಭಿಮಾನಿಗಳಲ್ಲೂ ಸಂತಸ ಮನೆ ಮಾಡಿದೆ. ಇದನ್ನೂ ಓದಿ: ರಾಮಾಚಾರಿಗೆ ಐರಾಳ ಗೂಗ್ಲಿ- ಶೇರಿಂಗ್, ಕೇರಿಂಗ್ ವೀಡಿಯೋ ವೈರಲ್

ayra

ಹುಟ್ಟುಹಬ್ಬದ ಪ್ರಯುಕ್ತ ಸಾಮಾಜಿಕ ಜಾಲತಾಣಗಳಲ್ಲಿ ಮಗಳು ನಗುತ್ತಿರುವ ಹಾಗೂ ಹಳೆಯ ಫೋಟೋಗಳನ್ನು ಕೊಲಾಜ್ ಮಾಡಿ ಹಾಕಿರುವ ರಾಧಿಕಾ, ನಮ್ಮ ಜೀವನದಲ್ಲಿ ನೀನು ನಮಗೆ ಖುಷಿ ಬಿಟ್ಟು ಬೇರೇನೂ ನೀಡಿಲ್ಲ. ನಮ್ಮ ಪುಟ್ಟ ದೇವತೆಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಬೇಗ ಬೆಳೆಯಬೇಡ ಎಂದು ತಮಾಷೆಯಾಗಿ ಹೇಳಿದ್ದಾರೆ. ಇದನ್ನೂ ಓದಿ: ತಮ್ಮನನ್ನ ತೊಡೆ ಮೇಲೆ ಮಲಗಿಸ್ಕೊಂಡು ಲಾಲಿ ಹಾಡಿದ ಐರಾ- ವಿಡಿಯೋ ವೈರಲ್

2018 ಡಿಸೆಂಬರ್ 2 ರಂದು ಯಶ್, ರಾಧಿಕಾ ಅವರ ಮುದ್ದುಮಗಳಾಗಿ ಐರಾ ಜನಿಸಿದ್ದಾಳೆ. ಮಗಳು ಹುಟ್ಟಿ ಕೆಲ ತಿಂಗಳ ಬಳಿಕ ಆಕೆಯ ನಾಮಕರಣವನ್ನೂ ಕೂಡ ದಂಪತಿ ಅದ್ಧೂರಿಯಾಗಿ ಆಚರಿಸಿದ್ದರು. ತಾಜ್ ವೆಸ್ಟ್ ಎಂಡ್ ನಲ್ಲಿ ತಮ್ಮ ಪುತ್ರಿಯ ನಾಮಕರಣ ಕಾರ್ಯಕ್ರಮ ನಡೆದಿದ್ದು, ಒಕ್ಕಲಿಗರ ಸಂಪ್ರದಾಯದಂತೆ ನಾಮಕರಣ ನೆರವೇರಿಸಿದ್ದರು. ಶತಭಿಷಾ ನಕ್ಷತ್ರ, ಸಿಂಹ ಲಗ್ನದಲ್ಲಿ ನಾಮಕರಣ ಶಾಸ್ತ್ರ ನಡೆದಿದ್ದು, ಕಾರ್ಯಕ್ರಮದಲ್ಲಿ ಸಂಬಂಧಿಕರು ಮತ್ತು ಆಪ್ತರು ಮಾತ್ರ ಭಾಗವಹಿಸಿ ಮಗುವಿಗೆ ಆಶೀರ್ವಾದ ಮಾಡಿದ್ದರು. ಐರಾ ಅಂದರೆ ಲಕ್ಷ್ಮಿ ಅರ್ಥ ಬರುವ ಹಿನ್ನೆಲೆಯಲ್ಲಿ ಈ ಹೆಸರನ್ನು ಇರಿಸಿದ್ದರು. ಇದನ್ನೂ ಓದಿ: ಐರಾಳ ನಗುವಿಗೆ ಮನಸೋತ ನೆಟ್ಟಿಗರು – ತಾಯಿ, ಮಗಳ ಕ್ಯೂಟ್ ವಿಡಿಯೋ ವೈರಲ್

ayra

ದಿನಗಳೆಯುತ್ತಿದ್ದಂತೆಯೇ ಐರಾಳ ತುಂಟಾಟದ ವೀಡಿಯೋಗಳನ್ನು ಆಗಾಗ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದರು. ಇತ್ತೀಷೆಗಷ್ಟೇ ಪುತ್ರ ಯಥರ್ವ್ ಮೊದಲ ವರ್ಷದ ಹುಟ್ಟುಹಬ್ಬವನ್ನು ಕೂಡ ತುಂಬಾನೇ ಗ್ರ್ಯಾಂಡ್ ಆಗಿ ಆಚರಿಸಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಗೋವಾ ಬೀಚ್ ನ ಮಧ್ಯದಲ್ಲಿ ಆಚರಿಸಿದ್ದರು. ಬಳಿಕ ಸೆಲೆಬ್ರೇಷನ್ ವೀಡಿಯೋ ಕೂಡ ಹಂಚಿಕೊಂಡಿದ್ದು, ಈ ವೀಡಿಯೋ ಭಾರೀ ವೈರಲ್ ಆಗಿತ್ತು.

Share This Article
Leave a Comment

Leave a Reply

Your email address will not be published. Required fields are marked *