ನೆಲಮಂಗಲ: ರಸ್ತೆ ಸುರಕ್ಷತೆ ಮಾಸದ ಕುರಿತು ಅರಿವು ಮೂಡಿಸುವ ಅಭಿಯಾನವನ್ನು ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿಯ ವತಿಯಿಂದ ಆಯೋಜಿಸಲಾಗಿತ್ತು.
Advertisement
ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಸಾರಿಗೆ ಕಚೇರಿ ಆವರಣದಲ್ಲಿ ಆಭಿಯಾನ ನಡೆಸಿದ ಹಿರಿಯ ಮೋಟಾರು ನಿರೀಕ್ಷ ಡಾ.ಧನ್ವಂತರಿ ಒಡೆಯರ್, ಸಿಬ್ಬಂದಿಯೊಂದಿಗೆ ಸಾರ್ವಜನಿಕರಿಗೆ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸದ ಬಗ್ಗೆ ವಿವರಿಸಿದ್ದರು. ‘ರಸ್ತೆ ಸುರಕ್ಷತೆ ಜೀವನ ರಕ್ಷೆ’ ಎಂಬ ಧ್ಯೇಯದೊಂದಿಗೆ ವಾಹನಗಳನ್ನು ಚಲಾಯಿಸುವದರಿಂದ ಅಪಘಾತಗಳನ್ನು ತಪ್ಪಿಸಬಹುದು. ರಸ್ತೆಯನ್ನು ಉಪಯೋಗಿಸುವ ಪ್ರಾಣಿಗಳು ಪಾದಚರಿಗಳು ಸೈಕಲ್ ಸವಾರರು ಎಲ್ಲರೂ ನಮ್ಮವರು ಎಂಬ ಭಾವನೆಯೊಂದಿಗೆ ವಾಹನಗಳನ್ನು ಓಡಿಸಬೇಕು ಎಂದು ಸಲಹೆ ನೀಡಿದರು.
Advertisement
Advertisement
ಎಲ್ಲ ವಾಹನ ಚಾಲಕರಿಗೆ ಪ್ರಮಾಣ ವಚನ ಬೋಧಿಸಿ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು, ಕಾರ್ ಚಾಲಕರು ಸೀಟ್ ಬೆಲ್ಟ್ ಹಾಗೂ ಸಾರಿಗೆ ಇಲಾಖೆ ಪೊಲೀಸ್ ಇಲಾಖೆಯ ಎಲ್ಲ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಸಬೇಕು. ನಿಮ್ಮ ಒಂದು ತಪ್ಪಿನಿಂದ ಇತರರಿಗೆ ತೊಂದರೆಯಾಗದಂತೆ ವಾಹನಗಳನ್ನ ಚಲಾಯಿಸುವ ಕೆಲಸ ನಿಮ್ಮದಾಗಿರುತ್ತೆ. ಹೀಗಾಗಿ ಎಲ್ಲ ಸಮಯದಲ್ಲಿ ತಾಳ್ಮೆಯಿಂದ ಚಾಲನೆ ಮಾಡಿ ಎಂದು ಒಡೆಯರ್ ಸಲಹೆ ನೀಡಿದರು.