ಚಿಕ್ಕಮಗಳೂರು: ರಸ್ತೆ ಮಧ್ಯೆಯೇ ನಡೆಸಿರೋ ವಾಮಾಚಾರ ಕಂಡು ಹಳ್ಳಿ ಜನ ಆತಂಕಕ್ಕೀಡಾಗಿರೋ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ರಂಗನೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಂಗೇನಹಳ್ಳಿ ಗ್ರಾಮದಿಂದ ಬರಗೇನಹಳ್ಳಿಗೆ ಹೋಗುವ ಮಾರ್ಗ ಮಧ್ಯೆ ಕಿಡಿಗೇಡಿಗಳು ಈ ವಾಮಾಚಾರ ನಡೆಸಿದ್ದಾರೆ. ಬೆಳ್ಳಮಬೆಳಗ್ಗೆಯೇ ಕೃಷಿ ಕೆಲಸಕ್ಕೆ ಜಮೀನಿಗೆ ಹೋಗುವ ರೈತರು ಇದನ್ನ ಕಂಡು ಕಂಗಾಲಾಗಿದ್ದಾರೆ. ವಾಮಾಚಾರ ನಡೆಸಿದ ದುಷ್ಕರ್ಮಿಗಳು ವಾಮಾಚಾರದ ಬಳಿಕ ಅವರು ತಂದಿದ್ದ ಎಲ್ಲಾ ವಸ್ತುಗಳನ್ನ ಅಲ್ಲೇ ಬಿಟ್ಟು ಹೋಗಿದ್ದಾರೆ. ಕೋಳಿ, ನಿಂಬೆಹಣ್ಣು, ಮೊಟ್ಟೆ, ಹೊಸ ಬಟ್ಟೆ, ಅನ್ನ, ತೆಂಗಿನಕಾಯಿ, ಅರಿಶಿನ-ಕುಂಕುಮ, ಮೂರು ತರದ ದಾರ, ಬಳೆ, ತಲೆಗೂದಲು ಸೇರಿದಂತೆ ವಿವಿಧ ವಸ್ತುಗಳು ಸ್ಥಳದಲ್ಲಿ ಪತ್ತೆಯಾಗಿವೆ.
Advertisement
ಎರಡು ತಿಂಗಳ ನಂತರ ಎರಡಂಕಿಗೆ ಇಳಿದ ಕೊರೊನಾ ಪ್ರಕರಣ- ನಿಟ್ಟುಸಿರು ಬಿಟ್ಟ ಕಾಫಿನಾಡಿಗರು https://t.co/2zpMyzyZSz#Chikkamagaluru #CoronaVirus #COVID19 #KannadaNews
— PublicTV (@publictvnews) June 25, 2021
Advertisement
ವಾಮಾಚಾರ ನಡೆಸುವವರು ಸಾಮಾನ್ಯವಾಗಿ ಮೂರು ದಾರಿ ಕೂಡಿರುವ ಕಡೆ ವಾಮಾಚಾರ ನಡೆಸುತ್ತಾರೆ. ಆದರೆ ಇಲ್ಲಿ ನೇರ ರಸ್ತೆಯಲ್ಲಿ ಈ ರೀತಿ ಕೆಟ್ಟದ್ದಾಗಿ ವಾಮಾಚಾರ ಮಾಡಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಈ ರಸ್ತೆಯಲ್ಲಿ ಬರಗೇನಹಳ್ಳಿ, ರಂಗೇನಹಳ್ಳಿ, ಅರುವನಹಳ್ಳಿ, ಗೌಳಿಗರ ಕ್ಯಾಂಪ್ ಸೇರಿದಂತೆ ಏಳೆಂಟು ಗ್ರಾಮದ ಜನ ದಿನಂ ಪ್ರತಿ ಓಡಾಡುತ್ತಾರೆ. ಸಾಲದಕ್ಕೆ ಕೃಷಿ ಕೆಲಸಕ್ಕೂ ನೂರಾರು ರೈತರು ಓಡಾಡುತ್ತಾರೆ. ಇಂತಹಾ ಜನವಸತಿ ಪ್ರದೇಶದಲ್ಲಿ ರಸ್ತೆ ಹೀಗೆ ವಾಮಾಚಾರ ಮಾಡಿರುವುದರಿಂದ ಸ್ಥಳೀಯರು ಕೂಡ ಭಯಭೀತರಾಗಿದ್ದಾರೆ. ಲಕ್ಕವಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Advertisement