ಪಾಟ್ನಾ: ಸಾಮಾನ್ಯವಾಗಿ ರೈಲ್ವೇ ಟ್ರ್ಯಾಕ್ ನಲ್ಲಿ ರೈಲು ಮಾತ್ರ ಚಲಿಸುತ್ತೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ಹೆಚ್ಚೆಂದರೆ ಜನ ಟ್ರ್ಯಾಕ್ ನಲ್ಲಿ ನಡೆದುಕೊಂಡು ಹೋಗಬಹುದು ಅಷ್ಟೆ. ಆದರೆ ಈ ಟ್ರ್ಯಾಕ್ ನಲ್ಲಿ ಬೈಕ್ ಓಡಿಸುತ್ತಾರೆ ಅಚ್ಚರಿಯಾದರೂ ಸತ್ಯ.
ಹೌದು. ಪ್ರಯಾಣಿಕರ ರೈಲು ಆಗಿರಲಿ ಅಥವಾ ಪ್ರಯಾಣಿಕರಿಗೆ ಸರಕು ಸಾಗಟ ಮಾಡುವ ರೈಲುಗಳು ಓಡಲು ಹಳಿಗಳ ಮಿತಿಯನ್ನು ನಿಗದಿಪಡಿಸಲಾಗಿದೆ. ಈ ಹಳಿಯಲ್ಲಿ ಬೇರೆ ಯಾವುದೇ ವಾಹನ ಚಲಿಸುವುದನ್ನು ನಿಷೇಧಿಸಲಾಗಿದೆ. ಆದರೆ ಬಿಹಾರದ ಛಪ್ರಾದ ರೈಲ್ವೆ ಕ್ರಾಸಿಂಗ್‍ನಲ್ಲಿ ಅಚ್ಚರಿಯ ಸಂಗತಿಯೊಂದು ನಡೆದಿದೆ.
Advertisement
Advertisement
ನಗರದ ಮಧ್ಯಭಾಗದಲ್ಲಿ ಮೊದಲ ಡಬಲ್ ಡೆಕ್ಕರ್ ಸೇತುವೆಯ ನಿರ್ಮಾಣದಿಂದಾಗಿ ಪ್ರತಿನಿತ್ಯ ಟ್ರಾಫಿಕ್ ಜಾಮ್ ಆಗುವ ಪರಿಸ್ಥಿತಿ ಎದುರಾಗಿದೆ. ಇದನ್ನು ತಪ್ಪಿಸಲು ಜನರು ತಮ್ಮ- ತಮ್ಮ ಕೆಲಸಗಳಿಗೆ ತೆರಳಲು ಬೇರೆ ಮಾರ್ಗವನ್ನು ಅನುಸರಿಸಲು ಪ್ರಯತ್ನಿಸಿದ್ದಾರೆ. ಹೀಗಾಗಿ ಅನೇಕ ಮಂದಿ ಬೈಕು ಸವಾರರು ರೈಲ್ವೆ ಹಳಿಗಳಲ್ಲಿ ಹೋಗುತ್ತಿರುವುದು ಕಂಡುಬಂದಿದೆ.
Advertisement
ಜನರು ತಮ್ಮ ಕೆಲಸಕ್ಕೆ ಹೋಗಲು ಅದೇ ರೈಲ್ವೆ ಕ್ರಾಸಿಂಗ್ ಸಂಖ್ಯೆ 44 ಮೂಲಕ ಹೋಗುತ್ತಿದ್ದರು. ಹಮ್ಸಾಫರ್ ರೈಲು ನಿಂತಿದ್ದರಿಂದ ರೈಲ್ವೆ ಕ್ರಾಸಿಂಗ್ ಅನ್ನು ಕೆಲ ಹೊತ್ತು ಸ್ಥಗಿತಗೊಳಿಸಲಾಗಿತ್ತು. ಆದರೂ ಜನ ತಾಳ್ಮೆಯಿಂದ ಪ್ರತಿಕ್ರಿಯಿಸಿದರು. ಜನ ತಮ್ಮ ಜೀವವನ್ನು ಲೆಕ್ಕಿಸದೆ ರೈಲುಗಳಿಗಾಗಿ ಮಾಡಿದ ಹಳಿಗಳ ನಡುವೆ ತಮ್ಮ ಬೈಕ್‍ಗಳಲ್ಲಿ ಹೋಗಲು ಪ್ರಾರಂಭಿಸಿದರು. ಆ ಟ್ರ್ಯಾಕ್‍ನಲ್ಲಿ ರೈಲು ಬಂದರೆ ಅಪಘಾತ ಕಟ್ಟಿಟ್ಟ ಬುತ್ತಿ ಅಲ್ಲದೆ ಎಷ್ಟು ಮಾರಕವಾಗಬಹುದು ಎಂಬುದು ಕಲ್ಪನೆಗೆ ಮೀರಿದೆ.
Advertisement
ಕೊರೊನಾ ಎಂಬ ಸಾಂಕ್ರಾಮಿಕ ರೋಗದಿಂದಾಗಿ ಇಡೀ ದೇಶದಲ್ಲಿ ರೈಲು ಸಂಚಾರವನ್ನು ಕಡಿಮೆ ಮಾಡಲಾಗಿದೆ. ಅತ್ಯಂತ ಬ್ಯುಸಿ ಇರುವ ರೈಲ್ವೇ ಟ್ರ್ಯಾಕ್ ಗಳಲ್ಲಿ ಇದೂ ಒಂದಾಗಿದೆ. ಇನ್ನೊಂದು ವಿಚಾರವೆಂದರೆ, ರೈಲ್ವೆ ಆಡಳಿತವು ಪ್ರತಿ ಬಿಡುವಿಲ್ಲದ ರೈಲು ಗೇಟ್‍ನಲ್ಲಿ ರೈಲ್ವೆ ಸಂರಕ್ಷಣಾ ಪಡೆಯ ಸಿಬ್ಬಂದಿಯನ್ನು ನೇಮಿಸುತ್ತದೆ. ಆದರೆ ಈ ರೈಲು ಗೇಟ್‍ನಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ. ಹೀಗಾಗಿ ಬೈಕ್ ನಲ್ಲಿ ಜನ ಓಡಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ರೈಲ್ವೆ ಕ್ರಾಸಿಂಗ್‍ನ ಎರಡೂ ಹಳಿಗಳಲ್ಲಿ ಎರಡೂ ದಿಕ್ಕುಗಳಿಂದ ರೈಲು ನಿಂತಿದೆ. ರೈಲ್ವೆ ಕ್ರಾಸಿಂಗ್ ಅನ್ನು ಮುಚ್ಚಲು ಗೇಟ್‍ಮ್ಯಾನ್ ಕಾಯುತ್ತಿದ್ದಾರೆ, ಆದರೆ ಜನರು ರೈಲ್ವೆ ಕ್ರಾಸಿಂಗ್‍ಗಳನ್ನು ಸಹ ನಿಲ್ಲಿಸಲು ಅವಕಾಶ ನೀಡದಷ್ಟು ಅವಸರದಲ್ಲಿದ್ದಾರೆ. ಹೀಗಾಗಿ ಗೇಟ್ ಮುಚ್ಚುವುದು ಸಹ ಕಷ್ಟ ಎನ್ನುವಂತಾಗಿದೆ.