– ಸಿಎಂ ಬದಲಾವಣೆ ಚರ್ಚೆಯಲ್ಲಿ ನಾನಿಲ್ಲ
ಧಾರವಾಡ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆಯ ಬಳಿಕ ಸಿಎಂ ರೇಸ್ ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೆಸರು ಮುಂಚೂಣಿಯಲ್ಲಿದೆ. ಈ ಎಲ್ಲ ಸುದ್ದಿಯ ಗದ್ದಲದ ಮಧ್ಯೆ ರಸ್ತೆ ಬದಿ ನಿಂತು ಪ್ರಹ್ಲಾದ್ ಜೋಶಿ ಸೀಬೆ ಹಣ್ಣು ಸವಿದಿದ್ದಾರೆ. ಜೊತೆಗೆ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
Advertisement
ಧಾರವಾಡ ಪೇಡದಷ್ಟೇ ನವಲೂರ ಪೇರಳೆ ಹಣ್ಣು ಬಹಳ ಫೇಮಸ್. ಧಾರವಾಡ ಕಾರ್ಯಕ್ರಮಕ್ಕೆ ಹೋಗಬೇಕಾದ್ರೇ ಸಾವಯವ ಕೃಷಿ ರೈತ ಮಹಿಳೆ ರೇಣುಕಾ ರಾವಳ ಅವರು ಬೆಳದಿದ್ದ ಹಣ್ಣು ತಗೊಂಡು ಸವಿದೆ. ಧಾರವಾಡಕ್ಕೆ ಬಂದರೆ ಪೇರಳೆ ಹಣ್ಣು ತಿನ್ನೋಕೆ ಮರೆಯಬೇಡಿ ಅಂತಾ ಜೋಶಿ ಖುಷಿ ಹಂಚಿಕೊಂಡಿದ್ದಾರೆ.
Advertisement
ನಮ್ಮ ನವಲೂರ ಪ್ಯಾರಲ್ ಹಣ್ಣು…..ಧಾರವಾಡ ಫೇಡೆದ ಅಷ್ಟ ಫೇಮಸ್ ಇರೋದ……….
ಇವತ್ತ ಧಾರವಾಡಕ್ಕ ಕಾರ್ಯಕ್ರಮಕ್ಕ ಹೋಗಬೇಕಾರ ಸಾವಯವ ಕೃಷಿ ಒಳಗ ಬೆಳದ ರೈತ ಮಹಿಳೆ ರೇಣುಕಾ ರಾವಳ ಅವರು ಬೆಳದದ್ದ ಪ್ಯಾರಲ ಹಣ್ಣತೊಗೊಂಡ ಸವಿದಿದ್ದು.
ಧಾರವಾಡಕ್ಕ ಹೋಗಬೇಕಾರ ಒಮ್ಮೆ ನವಲೂರ ಪ್ಯಾರಲ ಹಣ್ಣ ಮರೆಯೊಹಂಗಿಲ್ಲಾ….ನೀವು ಮರಿಬ್ಯಾಡ್ರಿ. pic.twitter.com/XCaopuIeKX
— Pralhad Joshi (@JoshiPralhad) July 24, 2021
Advertisement
ಇನ್ನೂ ಧಾರವಾಡದಲ್ಲಿ ಮಾತನಾಡಿದ ಅವರು, ಕೇಂದ್ರದ ನಾಯಕರು ಹಾಗೂ ಯಡಿಯೂರಪ್ಪನವರ ಮಾತುಕತೆಯಾಗಿದೆ ಅಂತಾ ಹೇಳಿದ್ದಾರೆ. ಅದು ಯಾವುದು ನನಗೆ ಗೊತ್ತಿಲ್ಲ. ಸಿಎಂ ಸ್ಥಾನಕ್ಕೆ ನನ್ನ ಹೆಸರು ಹಾಗೂ ಇನ್ನೊಬ್ಬರ ಹೆಸರು ಕೇಳಿ ಬಂದಿದ್ದು ಕೇವಲ ಮಾಧ್ಯಮದಲ್ಲಿ ಮಾತ್ರ. ನನ್ನ ಜೊತೆ ಯಾರೂ ಚರ್ಚೆ ಮಾಡಿಲ್ಲ. ಆ ಚರ್ಚೆಯಲ್ಲಿ ನಾನಿಲ್ಲ. ವಾರಣಾಸಿಗೆ ಯಾರು? ಯಾಕೆ? ಹೋಗಿದ್ದಾರೆ ಎಂದು ಅವರನ್ನೇ ಕೇಳಿ ಎಂದರು. ಇದನ್ನೂ ಓದಿ: ನಿಗರ್ಮನದ ಸಮಯದಲ್ಲೇ ಬಿಎಸ್‍ವೈ ಫುಲ್ ಆಕ್ಟೀವ್ – ದೆಹಲಿಯಲ್ಲಿ ಬೆಲ್ಲದ್ ಲಾಬಿ ಮುಂದುವರಿಕೆ