ಹಾವೇರಿ: ಕೊರೊನಾ ಎರಡನೇ ಅಲೆಯ ಭಯ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಯಾರಾದರೂ ಬಿದ್ದು ಒದ್ದಾಡುತ್ತಿದ್ದರು ಆಸ್ಪತ್ರೆಗೆ ಸೇರಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾವೇರಿಯ ಹುಕ್ಕೇರಿಮಠದ ಹತ್ತಿರ 60 ವರ್ಷದ ವೃದ್ಧೆ ಅಸ್ವಸ್ಥಗೊಂಡು ರಸ್ತೆಯ ಬದಿಯ ಚರಂಡಿ ಬಳಿ ಮಲಗಿದರೂ ಜನರು ಹಾಗೇ ಓಡಾಡಿದ್ದಾರೆ.
Advertisement
60 ವರ್ಷದ ವಯೋವೃದ್ದೆ ಅಸ್ವಸ್ಥವಾಗಿ ಮಲಗಿದನ್ನು ನೋಡಿದ ಜನರು ಹಾಗೆ ಓಡಾಡುತ್ತಿದ್ದರು. ಅಲ್ಲದೇ ಹುಕ್ಕೇರಿಮಠದ ಹತ್ತಿರದ ನಿವಾಸಿಗಳು, ಮಹಿಳೆಯರು ಕೆಲಕಾಲ ಅಜ್ಜಿಯನ್ನು ಆಸ್ಪತ್ರೆಗೆ ದಾಖಲಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಸಾಮಾಜಿಕ ಕಾರ್ಯಕರ್ತ ಕಿರಣ್ ಅಂಗಡಿ ಹಾಗೂ ಯುವಕರ ತಂಡ ವೃದ್ಧೆಯನ್ನು 108 ಅಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಿದರು.
Advertisement
Advertisement
ಸ್ಥಳೀಯ ನಿವಾಸಿಗಳು ಹಾಗೂ ಮಹಿಳೆಯರ ತಂಡ ಎರಡು ಗಂಟೆಗಳ ಕಾಲ ಅಜ್ಜಿಯನ್ನ ಆಸ್ಪತ್ರೆಗೆ ದಾಖಲಿಸಲು ಸತತ ಪ್ರಯತ್ನ ನಡೆಸಿದರು. ಈಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕಾರ್ಯ ಮಾಡಿದ್ದಾರೆ.