ಹೈದರಾಬಾದ್: ಯುವಕನೋರ್ವನ ಮದುವೆಗಾಗಿ ಇಡೀ ಗ್ರಾಮದ ಜನರು ಸೇರಿ ರಸ್ತೆ ನಿರ್ಮಾಣವನ್ನು ಮಾಡಿದ ಘಟನೆ ಹೈದರಬಾದ್‍ನ ಅದಿಲಾಬಾದ್ ಹಳ್ಳಿಯಲ್ಲಿ ನಡೆದಿದೆ.
ಹನುಮಂತು ಎನ್ನುವ ಯುವಕನಿಗೆ ಅದೇ ಜಿಲ್ಲೇಯ ಲಕ್ಷ್ಮೀಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಹನುಮಂತು ಗ್ರಾಮಕ್ಕೆ ರಸ್ತೆ ಇಲ್ಲದ ಕಾರಣ ನಾವು ನಮ್ಮ ಮಗಳನ್ನು ಕೊಡಲ್ಲ ಎಂದು ಯುವತಿಯ ಪೋಷಕರು ಹೇಳಿದ್ದರು.
ನಮ್ಮ ಊರಿನ ಯುವಕನಿಗೆ ಊರಿಗೆ ರಸ್ತೆ ಇಲ್ಲ ಎನ್ನುವ ಒಂದು ಕಾರಣದಿಂದಾಗಿ ಹೆಣ್ಣು ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಬೇಸರಗೊಂಡ ಗ್ರಾಮಸ್ಥರು, ಒಟ್ಟಾಗಿ ಸೇರಿ ಒಂದು ನಿರ್ಧಾರಕ್ಕೆ ಬಂದರು. ಊರಿನ ಗ್ರಾಮಸ್ಥರೆಲ್ಲ ಸೇರಿ ಊರಿಗೆ ಒಂದು ರಸ್ತೆ ನಿರ್ಮಿಸಬೇಕು ಎಂದು ಮಾತನಾಡಿಕೊಂಡು ರಸ್ತೆ ನಿರ್ಮಾಣ ಮಾಡಿದರು. ಬಳಿಕ ಊರಿನ ಜನರೆಲ್ಲರೂ ಸೇರಿ ಹನುಮಂತು, ಲಕ್ಷ್ಮೀ ಮದುವೆ ಮಾಡಿದರು.