ಆಂಸ್ಟರ್ಡ್ಯಾಮ್: ಗುಜರಾತಿನಲ್ಲಿ ಘಟಕ ತೆರೆದಿರುವ ನೆದರ್‌ಲ್ಯಾಂಡ್‌ನ ಪಾಲ್ -ವಿ ಕಂಪನಿಯ ಹಾರುವ ಕಾರು ಮುಂದಿನ ಎರಡು ವರ್ಷದಲ್ಲಿ ರಸ್ತೆಯಲ್ಲಿ ಇಳಿಯಲಿದೆ.
ನಾವು ಅಭಿವೃದ್ಧಿ ಪಡಿಸಿರುವ ಲಿಬರ್ಟಿ ಕಾರು ಯುರೋಪ್ ರಸ್ತೆಯಲ್ಲಿ ಸಂಚರಿಸಲು ಕಾನೂನಿನ ಮಾನ್ಯತೆ ಸಿಕ್ಕಿದೆ ಎಂದು ಕಂಪನಿ ತಿಳಿಸಿದೆ.
Advertisement
ಈ ವರ್ಷದ ಫೆಬ್ರವರಿಯಿಂದ ವೇಗ, ಬ್ರೇಕ್, ಎಮಿಷನ್, ಶಬ್ಧಮಾಲಿನ್ಯ ಸೇರಿದಂತೆ ವಿವಿಧ ಡ್ರೈವಿಂಗ್ ಪರೀಕ್ಷೆಗಳನ್ನು ಕಾರು ಎದುರಿಸಿತ್ತು. ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಮೈಕ್ ಸ್ಟೇಕಲನ್‌ಬರ್ಗ್ ಪ್ರತಿಕ್ರಿಯಿಸಿ, ಸಂಬಂಧಪಟ್ಟ ಇಲಾಖೆಗಳ ಜೊತೆ ಹಲವು ವರ್ಷಗಳ ಕಾಲ ಸಹಕಾರ ನೀಡಿ ನಾವು ಈ ಮೈಲಿಗಲ್ಲನ್ನು ಸೃಷ್ಟಿಸಿದ್ದೇವೆ. ನೆಲ ಮತ್ತು ಆಕಾಶದಲ್ಲಿ ಓಡುವ ಕಾರನ್ನು ವಿನ್ಯಾಸ ಮಾಡುವ ಕೆಲಸ ಸವಾಲಿನದ್ದಾಗಿತ್ತು ಎಂದು ಹೇಳಿದ್ದಾರೆ.
Advertisement
Advertisement
Advertisement
ತೆರಿಗೆ ಹೊರತುಪಡಿಸಿದರೆ ಈ ಕಾರಿಗೆ ಕಂಪನಿ 3,99,000 ಡಾಲರ್(ಅಂದಾಜು 2.52 ಕೋಟಿ ರೂ.) ಬೆಲೆಯನ್ನು ನಿಗದಿ ಪಡಿಸಿದೆ. 2012ರಲ್ಲಿ ಕಂಪನಿ ಭೂಮಿ ಮತ್ತು ಆಕಾಶದಲ್ಲಿ ಹಾರುವ ಕಾರಿನ ಮಾದರಿಯನ್ನು ತಯಾರಿಸಿತ್ತು. 2015ರಿಂದ ಯುರೋಪಿಯನ್ ಏವಿಯೇಶನ್ ಸೇಫ್ಟಿ ಏಜೆನ್ಸಿಯಿಂದ ಪ್ರಮಾಣಪತ್ರ ಪಡೆದುಕೊಳ್ಳಲು ಕೆಲಸ ಮಾಡುತ್ತಿದೆ. 150 ಗಂಟೆಗಳ ಹಾರಾಟದ ಪರೀಕ್ಷೆಯ ಬಳಿಕ ಕಂಪನಿಗೆ ಪ್ರಮಾಣಪತ್ರ ಸಿಗಲಿದೆ. 2022ರಲ್ಲಿ ಪ್ರಮಾಣಪತ್ರ ಸಿಗಲಿದ್ದು, ಆ ಬಳಿಕ ಕಾರು ಗ್ರಾಹಕರ ಕೈ ಸೇರಲಿದೆ.
ಮೊಟ್ಟೆ ಆಕಾರದ ಕ್ಯಾಬಿನ್ ಹೊಂದಿರುವ ಕಾರು ಡಬಲ್ ಸೀಟರ್ ಆಗಿದ್ದು ಟ್ವಿನ್ ಎಂಜಿನ್ ಇದೆ. ರಸ್ತೆಯಲ್ಲಿ ಗಂಟೆಗೆ 160 ಕಿ.ಮೀ ವೇಗದಲ್ಲಿ ಹೋಗುವ ಸಾಮರ್ಥ ಹೊಂದಿರುವ ಕಾರು 9 ಸೆಕೆಂಡ್‌ನಲ್ಲಿ 100 ಕೀ.ಮೀ ವೇಗವನ್ನು ತಲಪಬಲ್ಲದು. ಫ್ಲೈಟ್ ಮೋಡ್‌ನಲ್ಲಿ ಗಂಟೆಗೆ 180 ಕಿ.ಮೀ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಒಂದು ಬಾರಿ ಪೆಟ್ರೋಲ್ ಭರ್ತಿ ಮಾಡಿದರೆ 500 ಕಿ.ಮೀ ಹಾರಾಟ ನಡೆಸಬಹುದು ಎಂದು ಕಂಪನಿ ಹೇಳಿದೆ.
ಈಗಾಗಲೇ ಬುಕ್ಕಿಂಗ್ ಆರಂಭವಾಗಿದ್ದು ಗ್ರಾಹಕರ ಮನಸ್ಸು ಗೆದ್ದಿದೆ. ಆದರೆ ಶೇ.80 ರಷ್ಟು ಮಾಲೀಕರಿಗೆ ಹಾರಾಟದ ಲೈಸೆನ್ಸ್ ಇಲ್ಲ. ಹೀಗಾಗಿ ನಾವು ಗ್ರಾಹಕರಿಗೆ ಹಾರಾಟದ ತರಬೇತಿ ನೀಡಲು ಒಂದು ಅಕಾಡೆಮಿಯನ್ನು ತೆರೆದಿದ್ದೇವೆ ಎಂದು ಪಾಲ್ -ವಿ ಕಂಪನಿ ತಿಳಿಸಿದೆ.
ಕಂಪನಿ ಈಗಾಗಲೇ ಗುಜರಾತ್ ಸರ್ಕಾರದ ಜೊತೆ ಘಟಕ ಸ್ಥಾಪನೆ ಸಂಬಂಧ ಮಾತುಕತೆ ನಡೆಸಿದೆ. ಗುಜರಾತಿನಲ್ಲೇ ಕಾರನ್ನು ಉತ್ಪಾದಿಸಿ ವಿಶ್ವಕ್ಕೆ ಮಾರಾಟ ಮಾಡಲು ಕಂಪನಿ ಸಿದ್ಧತೆ ನಡೆಸುತ್ತಿದೆ.