ರಸ್ತೆಯಲ್ಲಿ ಉರುಳಾಡುವ ಶೋಭಾ ಕರಂದ್ಲಾಜೆ ಎಲ್ಲಿ..?: ಸೊರಕೆ

Public TV
1 Min Read
vinaykumar sorake

ಉಡುಪಿ: ದೇಶಾದ್ಯಂತ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ. ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಪೆಟ್ರೋಲ್-ಡೀಸೆಲ್ ಹಾಕದ ಪರಿಸ್ಥಿತಿ ಎದುರಾಗಿದೆ. ನಮ್ಮ ಅಧಿಕಾರ ಅವಧಿಯಲ್ಲಿ ರಸ್ತೆಯಲ್ಲಿ ಸಿಲಿಂಡರ್ ನಂತೆ ಉರುಳಾಡಿ ಪ್ರತಿಭಟನೆ ಮಾಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈಗೆಲ್ಲಿ ಎಂದು ಕಾಂಗ್ರೆಸ್ ನಾಯಕ ವಿನಯ್ ಕುಮಾರ್ ಸೊರಕೆ ಪ್ರಶ್ನೆ ಮಾಡಿದ್ದಾರೆ.

SHOBHA

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎತ್ತಿನಗಾಡಿ ಪ್ರತಿಭಟನೆ ಮಾಡಿದ್ದಾರೆ. ಎತ್ತಿನಗಾಡಿಯಲ್ಲದೆ ಈಗ ಮತ್ಯಾವುದರಲ್ಲಿ ಹೋಗಬೇಕು? ಮೂವತ್ತು ರೂಪಾಯಿ ಪೆಟ್ರೋಲ್ ಕೊಡ್ತೇವೆ ಎಂದು ವಾಗ್ದಾನ ಮಾಡಿದ್ದರು. ಕ್ರೂಡ್ ಆಯಿಲ್(ಕಚ್ಛಾ ತೈಲ) ದರ ಇಳಿಕೆಯಾದರೂ ಪೆಟ್ರೋಲ್ ದರ ಇಳಿಸಲಿಲ್ಲ. ರಸ್ತೆಯಲ್ಲಿ ಹೊರಳಾಡುತ್ತಿದ್ದ ಬಿಜೆಪಿ ಕಾರ್ಯಕರ್ತರು ಎಲ್ಲಿಗೆ ಹೋಗಿದ್ದಾರೆ? ಸಿಲಿಂಡರ್ ಥರ ಹೊರಳಾಡಿದ ಸಂಸದೆ ಎಲ್ಲಿದ್ದಾರೆ? ಎಂದು ಸೊರಕೆ ವ್ಯಂಗ್ಯದ ಮೂಲಕ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಗುಜರಾತ್‍ನ 17ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣವಚನ ಸ್ವೀಕಾರ

dk shivakumar siddaramaiah dinesh gundurao petrol medium

ದೇಶ ಕಟ್ಟಬೇಕು- ದೇಶ ಉಳಿಯಬೇಕು- ಹಾಗಾಗಿ ಏನಾದರೂ ಸಹಿಸಿಕೊಳ್ಳಬೇಕು. 70 ವರ್ಷದಲ್ಲಿ ಮಾಡಿದ ಸರ್ಕಾರಿ ಸ್ವತ್ತು ಮಾರಾಟವಾದರೂ ಬಾಯಿ ಮುಚ್ಚಿ ಕೂರಬೇಕು. ವಿರೋಧ ಪಕ್ಷ ಏನು ಮಾಡಿದರೂ ದೇಶದ್ರೋಹ. ದೇಶ ಕಟ್ಟುವವರಿಗೆ ಪ್ರತ್ಯೇಕ ಪೆಟ್ರೋಲ್ ಬಂಕ್ ಮಾಡಿ. ಈ ಬಗ್ಗೆ ಮನವಿ ಕೊಟ್ಟರೂ ಸರ್ಕಾರ ಸ್ಪಂದಿಸಿಲ್ಲ. ಜನಸಾಮಾನ್ಯರಿಗೆ 100 ರೂ. ದೇಶಭಕ್ತರಿಗೆ 200 ರೂ. ಪೆಟ್ರೋಲ್ ಕೊಡಿ ಎಂದು ಸೊರಕೆ ಬೆಲೆ ಏರಿಕೆ ವಿರುದ್ಧ ವ್ಯಂಗ್ಯವಾಡಿದರು.  ಇದನ್ನೂ ಓದಿ:  ಮೋದಿ ಸರ್ಕಾರದಿಂದ ಲವ್ ಲೆಟರ್ ಬಂದಿದೆ – ಆಪ್ ನಾಯಕ

Share This Article
Leave a Comment

Leave a Reply

Your email address will not be published. Required fields are marked *