ಮೈಸೂರು: ಮಾಜಿ ಪ್ರಧಾನಿಗಳಾದ ನೆಹರು ಮತ್ತು ವಾಜಪೇಯಿ ಅವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ಕೊಟ್ಟ ಬಿಜೆಪಿ, ಕಾಂಗ್ರೆಸ್ ಮುಖಂಡರ ವಿರುದ್ಧ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹರಿಹಾಯ್ದಿದ್ದಾರೆ.
Advertisement
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನೆಹರು ಅಧಿಕಾರದ ಅವಧಿಗಿಂತ ಹೆಚ್ಚಿನ ಅವಧಿ ಜೈಲಿನಲ್ಲಿ ಕಳೆದರು. ಅವರ ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿತ್ತು. ಅವರ ಬಗ್ಗೆ ಸಿ.ಟಿ. ರವಿ ಅವರು ಅವಹೇಳನಕಾರಿ ಮಾತು ಯಾರು ಮೆಚ್ಚುವಂಥದಲ್ಲ. ಸಿ.ಟಿ. ರವಿಗೂ ಮತ್ತು ಬಿಜೆಪಿಗೂ ಈ ಮಾತು ಶೋಭೆ ತರುವುದಿಲ್ಲ ಎಂದಿದ್ದಾರೆ.
Advertisement
Advertisement
ಸಿ.ಟಿ.ರವಿ ಅವರು ನೆಹರು ಬಗ್ಗೆ ಓದಿಕೊಳ್ಳಬೇಕು. ವಾಜಪೇಯಿ ಅವರು ನೆಹರು ನಿಧಾನರಾದಾಗ ಏನೂ ಭಾಷಣ ಮಾಡಿದ್ದರು ಎಂಬುದನ್ನು ಸಿ.ಟಿ. ರವಿ ಓದಿಕೊಳ್ಳಬೇಕು. ನೆಹರು ಅವರ ಬಗ್ಗೆ ವಾಜಪೇಯಿ ಅವರು ಚರಿತ್ರಾರ್ಹ ಭಾಷಣ ಮಾಡಿದ್ದಾರೆ. ನೆಹರು ಅವರ ಬಗ್ಗೆ ಇಷ್ಟು ಲಘುವಾಗಿ ಮಾತಾಡಬಾರದು. ನಿಮಗೆ ನೆಹರು ಬಗ್ಗೆ ಏನೂ ಗೊತ್ತಿದೆ? ಏನೂ ತಿಳಿದು ಕೊಂಡಿದ್ದೀರಿ? ಭಾರತದ ಆಸ್ಮಿತೆ ನೆಹರು. ಭಾರತದ ಗರ್ವದ ಸಂಕೇತ ನೆಹರು. ಇಂತಹ ನೆಹರು ಬಗ್ಗೆ ನೀವು ಕೀಳಾಗಿ ಮಾತಾಡುವುದು ತಪ್ಪು. ಪ್ರಚಾರಕ್ಕಾಗಿ, ಯಾರನ್ನೋ ಓಲೈಸಲು ನೀವು ರೀತಿ ಮಾತಾಡಬೇಡಿ ಎಂದು ತಿಳಿ ಹೇಳಿದ್ದಾರೆ.
Advertisement
ವಾಜಪೇಯಿ ಅವರನ್ನು ಕಾಂಗ್ರೆಸ್ ನಾಯಕರು ಕುಡುಕ ಎಂದಿದ್ದಾರೆ. ಇದು ಖಂಡನೀಯ. ನೆಹರು, ವಾಜಪೇಯಿ ಇಬ್ಬರು ಈ ದೇಶದ ಶ್ರೇಷ್ಠ ಆಡಳಿಗಾರರು. ಪ್ರಿಯಾಂಕ್ ಖರ್ಗೆ ತಮ್ಮ ತಂದೆ ನೋಡಿ ಮಾತಾಡುವುದು ಕಲಿಯಲಿ ಎಂದಿದ್ದಾರೆ. ಕರ್ನಾಟಕದಲ್ಲಿ ಐದು ಜನ ಮಾಜಿ ಸಿಎಂಗಳಿದ್ದಾರೆ. ನೀವು ಯಾಕೆ ಇದನ್ನು ಖಂಡಿಸುತ್ತಿಲ್ಲ? ನಿಮ್ಮ ಪಕ್ಷದ ನಾಯಕರಿಗೆ ಬಾಯಿ ಮುಚ್ಚಿಕೊಂಡಿರಿ ಎಂದು ಹೇಳುವಷ್ಟು ನೈತಿಕತೆ ಕಳೆದು ಕೊಂಡಿದ್ದೀರಾ. ರಾಜಕಾರಣವನ್ನು ಎಲ್ಲಿಗೆ ತಂದು ನಿಲ್ಲಿಸುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಸಂವಿಧಾನದತ್ತ ಸಂಸದ ಸ್ಥಾನಕ್ಕೆ ಬೆಲೆ ಕೊಡದ ಶ್ರೀನಿವಾಸ್‍ರದ್ದು ವಿಕೃತ ಮನಸ್ಥಿತಿ: ಬಿಜೆಪಿ ಟೀಕೆ
ನೆಹರು ಅವರ ತಂದೆ ತಮ್ಮ ಇಡೀ ಆಸ್ತಿಯನ್ನು ದೇಶಕ್ಕೆ ಬರೆದು ಕೊಟ್ಟರು. ಸಿ.ಟಿ. ರವಿ ಏನೂ ಕೊಟ್ಟಿದ್ದಾರೆ. ಐದು ಪೈಸೆಯನ್ನು ದೇಶಕ್ಕೆ ಕೊಟ್ಟಿದ್ದೀರಾ? ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ಅಫ್ಘಾನಿಸ್ತಾನದ ಸ್ಥಿತಿ ಘನಘೋರ – ವಿಮಾನದಿಂದ ಬಿದ್ದು ಮೂವರು ಸಾವು